ರಾಜಕೀಯ

ಕೋರ್ಟ್ ನಿಯಮ ಉಲ್ಲಂಘಿಸಿ ದೆಹಲಿಗೆ ಪ್ರಯಾಣ: ನಾಗೇಂದ್ರ ಸಚಿವ ಸ್ಥಾನಕ್ಕೆ ಕಂಟಕ?

Views: 19

ಕನ್ನಡ ಕರಾವಳಿ ಸುದ್ದಿ: ವಾಲ್ಮೀಕಿ ನಿಗಮ ಬಹುಕೋಟಿ ಭ್ರಷ್ಟಾಚಾರ ಹಗರಣ ಸಂಬಂಧ ನಾಗೇಂದ್ರ ಸಚಿವ ಸ್ಥಾನಕ್ಕೆ ಕುತ್ತು ಬಂದಿದೆ.

ಡಿಕೆಸಿ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಂಡಿರೋ ನಾಗೇಂದ್ರ ಇಡಿ ತನಿಖೆ ಎದುರಿಸುತ್ತಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಆದ್ರೆ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಭೇಟಿ ನೀಡಿದ್ದಾರೆ. ಅನುಮತಿಯನ್ನೇ ಪಡೆಯದೆ ನಾಗೇಂದ್ರ ಅವರು ಕಳೆದ ಜುಲೈ 17ರಂದು ದೆಹಲಿಗೆ ಹೋಗಿದ್ದರ ಮಾಹಿತಿ ಲಭ್ಯವಾಗಿದೆ.

ದೆಹಲಿಗೆ ತೆರಳಲು ಅನುಮತಿ ಕೋರಿ ನಾಗೇಂದ್ರ ಅರ್ಜಿ ಸಲ್ಲಿಸಿದ್ದರು. ಜುಲೈ 27ರಿಂದ ಆಗಸ್ಟ್ 10ರವರೆಗೆ ಅನುಮತಿ ಕೇಳಿದ್ದರು. ಪ್ರವಾಸಕ್ಕೆ ಸೂಕ್ತ ಕಾರಣ ಇಲ್ಲದೇ ಇದ್ದಿದ್ದರಿಂದ ಜನಪ್ರತಿನಿಧಿಗಳ ಕೋರ್ಟ್ ನಾಗೇಂದ್ರ ಅರ್ಜಿ ವಜಾ ಮಾಡಿತ್ತು. ಜುಲೈ 17ರಂದು ಅವರು ದೆಹಲಿಗೆ ತೆರಳಿದ್ದು,

ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬಿಟಿವಿ ದೃಶ್ಯಾವಳಿಗಳು, ಶಿಷ್ಟಾಚಾರ ವಿಭಾಗದ ರಿಜಿಸ್ಟರ್‌ಗಳು ಹಾಗೂ ವಿಮಾನಯಾನ ಸಂಸ್ಥೆಯ ದಾಖಲೆಗಳನ್ನು ಜಾಲಾಡಲು ಆರಂಭಿಸಿದ್ದಾರೆ. ದೆಹಲಿಗೆ ಹೋಗಿರುವ ಸಾಕ್ಷ್ಯ, ದಾಖಲೆ ಇಡಿ ಅಧಿಕಾರಿಗಳಿಗೆ ಸಿಕ್ಕರೆ ಕೋರ್ಟ್ ಗಮನಕ್ಕೆ ತರಲಿದ್ದಾರೆ.

Related Articles

Back to top button
error: Content is protected !!