ಇತರೆ

ಕುಂದಾಪುರ: ಹನಿಟ್ರ್ಯಾಪ್ ಸೇರಿದಂತೆ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಬಂಧನ

Views: 176

ಕನ್ನಡ ಕರಾವಳಿ ಸುದ್ದಿ: ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗುಲ್ವಾಡಿ ಸೌಕೂರು ಆಳ್ವರ ಮನೆಯ ಶಶಾಂಕ್ ಶೆಟ್ಟಿ (32) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 7 ಪ್ರಕರಣ, ಹೆಬ್ರಿ- 1, ಕಲಘಟಕಿ- 1, ಕೋಟ- 1 ಹಾಗೂ ಬೆಂಗಳೂರು ಚಂದ್ರ ಲೇ ಔಟ್-1 ರಂತೆ ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ಗಳಂತಹ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

ಈತನ ವಿರುದ್ಧ ನ್ಯಾಯಾಲಯವು ಈವರೆಗೆ 12 ಬಾರಿ ವಾರೆಂಟ್ ಹೊರಡಿಸಿದ್ದು ಈತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 4 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಯ ಬಗ್ಗೆ 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದು ಖಚಿತ ಮಾಹಿತಿಯಂತೆ ಶಶಾಂಕ್ ಶೆಟ್ಟಿಯನ್ನು ಫೆ.15 ರಂದು ಕುಂದಾಪುರ ತಾಲೂಕು ಬಿದ್ಮಲ್ ಕಟ್ಟೆ ಎಂಬಲ್ಲಿ ಬಂದಿಸಲಾಗಿದೆ.

ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ ಮತ್ತು ಪೊಲೀಸ್‌ ವೃತ್ತ ನಿರೀಕ್ಷಕ ಸಂತೋಷ ಎ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಾದ ನಾಸೀರ್ ಹುಸೇನ್ ಹಾಗೂ ಚಂದ್ರಕಲಾ ಮ ಪತ್ತಾರ ಅವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿ ರಾಜು ಬಿ, ಗುರು ಪ್ರಸಾದ್, ಕಿರಣ್ ಬಿ ಪಾಟೀಲ್ ಹಾಗೂ ಕುಂದಾಪುರ ಠಾಣಾ ಸಿಬಂದಿ ಚಂದ್ರ ಶೆಟ್ಟಿ ಈ ಕಾರ್ಯಾಚರಣೆ ನಡೆಸಿದ್ದಾರೆ.

Related Articles

Back to top button
error: Content is protected !!