ನಾಳೆ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣ: ಎಲ್ಲಿ,ಯಾವಾಗ ಗೋಚರ
Views: 64
ಕನ್ನಡ ಕರಾವಳಿ ಸುದ್ದಿ: 2026ನೇ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣ ಮಂಗಳವಾರ ಸಂಭವಿಸಲಿದೆ. ಈ ವೇಳೆ ಸೂರ್ಯನ ಶೇ.96ರಷ್ಟು ಭಾಗವನ್ನು ಚಂದ್ರ ಆವರಿಸಲಿದೆ. ‘ರಿಂಗ್ ಆಫ್ ಫೈರ್’ ಎಂದು ಜನಪ್ರಿಯವಾಗಿರುವ ಖಗೋಳ ವಿಸ್ಮಯ 2 ನಿಮಿಷ 20 ಸೆಕೆಂಡ್‌ಗಳವರೆಗೆ ರೂಪುಗೊಳ್ಳುತ್ತದೆ.
ಸೂರ್ಯ-ಚಂದ್ರ-ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣವಾಗುತ್ತದೆ. ಈ ಬಾರಿ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿ ನೆಲೆಗೊಂಡಿರುವ ಕಾರಣ ಚಂದ್ರನಿಗೆ ಸೂರ್ಯನನ್ನು ಪೂರ್ಣ ಮರೆಮಾಡಲು ಸಾಧ್ಯವಾಗುವುದಿಲ್ಲ. ಗ್ರಹಣದ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಸೂರ್ಯನ ಕೇವಲ ಮಧ್ಯಭಾಗವನ್ನು ಮಾತ್ರ ಚಂದ್ರ ಮುಚ್ಚುತ್ತಾನೆ. ಆಗ ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಪ್ರಕಾಶಮಾನವಾಗಿ ಕಾಣುತ್ತವೆ. ಇದನ್ನೇ ಕಂಕಣ ಸೂರ್ಯಗ್ರಹಣ’ ಎನ್ನುತ್ತಾರೆ. ಈ ದೃಶ್ಯವನ್ನೇ ‘ರಿಂಗ್ ಆಫ್ ಫೈರ್’ ಎನ್ನಲಾಗುತ್ತದೆ. ನಾಸಾ ಪ್ರಕಾರ, ಚಂದ್ರನು ಭೂಮಿಯಿಂದ ತನ್ನ ಅತ್ಯಂತ ದೂರದ ಬಿಂದುವಿನಲ್ಲಿ ಅಥವಾ ಹತ್ತಿರದಲ್ಲಿರುವ ಸಮಯ ಇದಾಗಿದೆ.ಪೂರ್ಣ ಸೂರ್ಯಗ್ರಹಣದ ಗರಿಷ್ಠ ಸಮಯ 2 ನಿಮಿಷ 20 ಸೆಕೆಂಡ್‌ಗಳಷ್ಟು ಇರಲಿದೆ. ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.
ದಿನಾಂಕ: ಫೆಬ್ರವರಿ 17, 2026
ವಿಧ: ಕಂಕಣ ಸೂರ್ಯ ಗ್ರಹಣ (Ring of Fire)
ಭಾರತದಲ್ಲಿ ಗೋಚರತೆ: ಇಲ್ಲ
ಸಮಯ: ಗ್ರಹಣವು ಅಂತರರಾಷ್ಟ್ರೀಯ ಸಮಯ (UTC) ಬೆಳಿಗ್ಗೆ 07:01 ಕ್ಕೆ ಪ್ರಾರಂಭವಾಗುತ್ತದೆ.
ವೀಕ್ಷಣೆ: ನಾಸಾ (NASA) ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳ ಲೈವ್ ಸ್ಟ್ರೀಮ್‌ಗಳ ಮೂಲಕ ಇದನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.






