ನಿವೃತ್ತ ಉಪನ್ಯಾಸಕ, ಸಾಹಿತಿ, ಅಂಕಣಕಾರ, ರಂಗಕರ್ಮಿ ಕೋ.ಶಿವಾನಂದ ಕಾರಂತ ನಿಧನ
Views: 102
ಕನ್ನಡ ಕರಾವಳಿ ಸುದ್ದಿ: ನಿವೃತ್ತ ಉಪನ್ಯಾಸಕ, ಸಾಹಿತಿ, ಅಂಕಣಕಾರ, ರಂಗಕರ್ಮಿ ಕೋಣಿ ಶಿವಾನಂದ ಕಾರಂತ ಗುಜ್ಜಾಡಿ (80) ಅವರು ಫೆ.11ರಂದು ನಿಧನ ಹೊಂದಿದರು.
ಮೃತರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ.
ಗಂಗೊಳ್ಳಿಯ ಎಸ್‌ವಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ 2004 ರಲ್ಲಿ ನಿವೃತ್ತರಾಗಿದ್ದರು.ಅವರು ಉತ್ತಮ ಲೇಖಕರಾಗಿದ್ದು, ಸಂಗೀತ, ರಂಗಭೂಮಿ, ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಜ್ಞಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೋಟ ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 5 ಸಾವಿರಕ್ಕೂ ಹೆಚ್ಚು ಅಂಕಣಕಾರರಾಗಿ, ಕುಂದಪ್ರಭ ವಾರಪತ್ರಿಕೆಯಲ್ಲಿ ಮೂರುವರೆ ದಶಕಗಳ ಕಾಲ ಅಂಕಣಕಾರರಾಗಿದ್ದರು.
ಆಕಾಶವಾಣಿ ಕಾರ್ಯಕ್ರಮ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿ, ನಟನೆ ಮತ್ತು ನಾಟಕ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. 10ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದು, ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮೃತರ ಅಂತಿಮ ದರ್ಶನ ಇಂದು( ಫೆ.12) ಬೆಳಿಗ್ಗೆ 7ರಿಂದ 8:30ರ ತನಕ ಕುಂದಾಪುರ ಭಗವಾನ್ ಬಿಲ್ಡಿಂಗ್ ರಸ್ತೆಯಲ್ಲಿರುವ ಮನೆಯಲ್ಲಿ, ನಂತರ ಬೆಳಿಗ್ಗೆ 10.30ಕ್ಕೆ ಗುಜ್ಜಾಡಿಯ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗುತ್ತದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.






