ಕುಂಭಾಸಿ :ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ” ಶ್ರೀರಾಮ, ಸೀತೆ,ಲಕ್ಷ್ಮಣ, ಹನುಮ ದೇವರ” ಪ್ರತಿಷ್ಠಾಪನೆ

Views: 38
ಕುಂದಾಪುರ: ಅಯೋಧ್ಯ ಶ್ರೀರಾಮಚಂದ್ರ ರಥದ ಕೆಲಸದ ಪ್ರಾರ್ಥನೆಗೆ ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ಪುತ್ರ ರಥಶಿಲ್ಪಿ ಕೆ. ರಾಜಗೋಪಾಲ್ ಆಚಾರ್ಯ ಅವರು ಅಯೋಧ್ಯೆ ಭೇಟಿ ನೀಡಿದ ಸಂದರ್ಭದಲ್ಲಿ ಕಿಷ್ಕಿಂದ ಹನುಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರು ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿ ಮಹಾರಾಜ ಅವರು ಶ್ರೀ ರಾಮಲಲ್ಲಾ ಬಾಲಾಲಯದಲ್ಲಿ ಇಟ್ಟು ಪೂಜಿಸಿ ನೀಡಿರುವ ಪಾದುಕೆ ಹಾಗೂ ಶ್ರೀರಾಮ ಸೀತೆ ಲಕ್ಷ್ಮಣ ಹನುಮದೇವರ ಪ್ರತಿಷ್ಠಾಪನೆ ಕಲಾಶಾಭಿಷೇಕ, ಶ್ರೀ ನಾಗದೇವರ ಪ್ರತಿಷ್ಠೆ ಕುಂಭಾಶಿ ವಿಶ್ವಕರ್ಮ ಗುರುಕುಲದಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರದಲ್ಲಿ ಜನವರಿ 24ರಂದು ಪ್ರತಿಷ್ಠಾಪಿಸಲಾಯಿತು.
ಆನೆಗುಂದಿ ಮಹಾಸಂಸ್ಥಾನದ ಶ್ರೀ ಶ್ರೀ ಮತ್ ಜಗದ್ಗುರು ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಪ್ರಸನ್ನ ಪೂಜೆ ನೆರವೇರಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
“ಸನಾತನ ಸಂಸ್ಕೃತಿಗೆ ಸಂದೇಶ ನೀಡಿದ ರಾಮಾಯಣದಲ್ಲಿ ಭಾತೃಪ್ರೇಮ, ಮಾತ್ರ ಪ್ರೇಮ, ಹನುಮಾನ್ ಸೇವಾ ನಿಷ್ಠೆ, ರಾಮನು ನಡೆದು ಬಂದ ದಾರಿ ನಮಗೆಲ್ಲರಿಗೂ ಮಾರ್ಗದರ್ಶನ ನೀಡಿ ಸನಾತನ ಧರ್ಮದ ಪರಿವರ್ತನೆಯಾಗಿ ಹಿಂದೂ ಸಮಾಜದ ಪರಿವರ್ತನೆಗೆ ಕಾಲ ಕೂಡಿ ಬಂದಿದೆ ” ಎಂದರು.
ವೇದಿಕೆಯಲ್ಲಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಳದ ಧರ್ಮದರ್ಶಿ ಶ್ರೀ ಧರ್ ಕಾಮತ್, ರಥಶಿಲ್ಪಿ ಶ್ರೀ ಲಕ್ಷ್ಮಿ ನಾರಾಯಣಚಾರ್ಯ, ರಥಶಿಲ್ಪಿ ಕೆ. ರಾಜಗೋಪಾಲಾಚಾರ್ಯ, ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಧರ್ಮದರ್ಶಿ ಶ್ರೀಧರ ಆಚಾರ್ಯ ವಡೇರ ಹೋಬಳಿ ಸಭೆಯಲ್ಲಿ ಉಪಸ್ಥಿತರಿದ್ದರು.
ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ವಿದ್ವಾನ್ ಪಂಜ ಭಾಸ್ಕರ್ ಭಟ್ ಪ್ರಸ್ತಾವಿಕವಾಗಿ ಮಾತನಾಡಿ, ‘ಗುರುಗಳ ಅನುಗ್ರಹದಿಂದ ದೇವರ ಅನುಗ್ರಹ ಪ್ರಾಪ್ತಿಯಾಗಿ ಸತ್ಕಾರ್ಯ ಪರಿಪೂರ್ಣವಾಗುತ್ತದೆ ಎಂದರು. ಲಕ್ಷ್ಮಿಕಾಂತ್ ಶರ್ಮ ಸ್ವಾಗತಿಸಿದರು. ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ವಂದಿಸಿದರು .