ಆರ್ಥಿಕ
ಕುಂದಾಪುರ: ಬ್ಯಾಂಕ್ ಖಾತೆಯಿಂದ 5.17 ಲ.ರೂ. ತೆಗೆದು ವಂಚನೆ

Views: 260
ಕನ್ನಡ ಕರಾವಳಿ ಸುದ್ದಿ,
ಕುಂದಾಪುರ: ಬ್ಯಾಂಕ್ ಖಾತೆಯಿಂದ 5.17 ಲಕ್ಷ ರೂಗಳನ್ನು ತೆಗೆದು ವಂಚಿಸಿರುವ ಘಟನೆ ನಡೆದಿದೆ.
ಮೀರಾ ಅವರು ಪ್ರದೀಪ ಆಲೂರು ಅವರ ಬ್ಯಾಂಕ್ ಖಾತೆಯಿಂದ ಹಣ ತೆಗೆದು ವಂಚಿಸಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಂಕಿನಿಂದ ನಗದನ್ನು ತೆಗೆದು 7 ಬೇರೆ ಬೇರೆ ಖಾತೆಗಳಿಗೆ ಜಮಾವಣೆ ಮಾಡಿ ಪ್ರೈವೇಟ್ ಇಕ್ವಿಟಿ ಅಕೌಂಟ್‌ನಲ್ಲಿ ಹೂಡಿಕೆ ಮಾಡಿಕೊಂಡು ಅಧಿಕ ಲಾಭಾಂಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ನಂಬಿಕೆ ದ್ರೋಹ ಮಾಡಿದ್ದಾರೆ, ಅತ್ತ ಹಣವು ಇಲ್ಲ, ಇತ್ತ ಲಾಭಾಂಶವೂ ನೀಡದೆ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.