ಇತರೆ

ಕುಂದಾಪುರ: ಜನ್ನಾಡಿಯಲ್ಲಿ ಕಾರು- ಬೈಕ್ ಅಪಘಾತ ಓರ್ವ ಸಾವು, ಇನ್ನೋರ್ವ ಗಂಭೀರ 

Views: 3151

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಜನ್ನಾಡಿ ಎಂಬಲ್ಲಿ ಕಾರು – ಬೈಕ್ ನಡುವೆ ಅಪಘಾತ ಸೆ.27ರಂದು ಮಧ್ಯಾಹ್ನದ ಹೊತ್ತಿಗೆ ಸಂಭವಿಸಿದೆ.

ಬೈಕ್ ನಡುವೆ ಢಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಪರಿಣಾಮ ಬೈಕ್ ಹಿಂಬದಿ ಸವಾರ ಉಳ್ಳೂರು 74 ನಿವಾಸಿ ರಂಗ ಮಡಿವಾಳ (42 ) ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತರಾಗಿದ್ದಾರೆ.

ಕೂಲಿ ಕಾರ್ಮಿಕರಾಗಿದ್ದ ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಬೈಕ್ ಸವಾರ ರಾಮ ಮಡಿವಾಳ (47) ಅವರಿಗೆ ಗಂಭೀರ ಗಾಯವಾಗಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀವ್ರತೆಗೆ ಅಪಘಾತದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕ್ ಕೂಡಾ ನಜ್ಜುಗುಜ್ಜಾಗಿದೆ. ಘಟನೆಯ ವೇಳೆ ಕಾರು ಬೈಕ್ ನ್ನು ಸುಮಾರು ನೂರು ಮೀಟರ್‌ ದೂರದವರೆಗೆ ಎಳೆದು ಸಾಗಿದೆ.

ಕಾರು ಚಾಲಕ ಭಾಗವತ ರಾಘವೇಂದ್ರ ಮಯ್ಯ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಗೆ ಹಿಂದಿರುತ್ತಿರುವ ಸಂದರ್ಭದಲ್ಲಿ ಈ ಅವಘಡಗಳು ಸಂಭವಿಸಿದೆ ಎಂದು ಹೇಳಲಾಗಿದೆ. ಕೋಟ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ

 

 

Related Articles

Back to top button
error: Content is protected !!