ಆರೋಗ್ಯ ವಿವಿಯ ಹಾಸ್ಟೆಲ್ ಗಳಲ್ಲಿ ಸೀಲಿಂಗ್ ಫ್ಯಾನ್‌ನಲ್ಲಿ ಆತ್ಮಹತ್ಯೆ ತಡೆ ಸಾಧನ

Views: 31
ಕನ್ನಡ ಕರಾವಳಿ ಸುದ್ದಿ:ಆರೋಗ್ಯ ವಿವಿಯ ವ್ಯಾಪ್ತಿಯಲ್ಲಿರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳ ಹಾಸ್ಟೆಲ್ ಗಳಲ್ಲಿ ಸೀಲಿಂಗ್ ಫ್ಯಾನ್‌ಗಲ್ಲಿ ‘ಆತ್ಮಹತ್ಯೆ ತಡೆ ಸಾಧನಗಳನ್ನು ಅಳವಡಿಸಲು ವೈದ್ಯಕೀಯ ಕಾಲೇಜುಗಳ ಮುಂಡಳಿಯಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಇತ್ತೀಚೆಗೆ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಎರಡು ವಾರಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆತ್ಮಹತ್ಯೆ ತಡೆಯುವ ಕ್ರಮಗಳ ಬಗ್ಗೆ ಚರ್ಚಿಸಲು ಆರ್‌ಜಿಎಚ್ ಎಸ್‌ಯುನ ಪಠ್ಯಕ್ರಮ ಅಭಿವೃದ್ದಿ ಕೋಶ ಡಾ. ಸಂಜೀವ್ ನೇತೃತ್ವದ ತಂಡವು ಜುಲೈ ಕೊನೆಯ ವಾರದಲ್ಲಿ ಎಂಐಎಂಸ್ ಗೆ ಭೇಟಿ ನೀಡಿತ್ತು.
ಆತ್ಮಹತ್ಯೆ ತಡೆಗಟ್ಟಲು ಸೀಲಿಂಗ್ ಫ್ಯಾನ್‌ಗಳಲ್ಲಿ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಯೋಜನೆಗಳು ನಡೆಯತ್ತಿವೆ ಎಂದು ಡಾ.ಸಂಜೀವ್ ಬಹಿರಂಗಪಡಿಸಿದರು.
ಎಂಐಎಂಎಸ್‌ನಲ್ಲಿ ಸಾಧನದ ಪ್ರದರ್ಶನ ನಡೆಸಲಾಗಿದೆ ಎಂದು ವರದಿಯಾಗಿದೆ. ಚರ್ಚೆಯ ಸಮಯದಲ್ಲಿ, ಕೆಲವು ವೈದ್ಯರು ಡೌನ್‌ರೋಡ್ ಕೊಕ್ಕೆಗಳನ್ನು ಬಳಸುವ ಬದಲು ನೇರವಾಗಿ ಸೀಲಿಂಗ್ ಗೋಡೆಗೆ ಫ್ಯಾನ್‌ಗಳನ್ನು ಜೋಡಿಸಲು ಸೂಚಿಸಿದರು. ಇದರಿಂದ ಇಡೀ ಘಟಕವು ಒತ್ತಡದಲ್ಲಿ ಕುಸಿಯುತ್ತದೆ, ಇದರಿಂದಾಗಿ ನೇಣು ಬಿಗಿದು ಕೊಳ್ಳುವ ಪ್ರಯತ್ನಗಳನ್ನು ತಡೆಯಬ ಹುದು ಎಂದು ಮೂಲಗಳು ತಿಳಿಸಿವೆ.
ಫ್ಯಾನ್‌ನಲ್ಲಿ ಹೆಚ್ಚು ತೂಕ ಕಂಡು ಬಂದರೆ ಅದನ್ನು ಪತ್ತೆ ಹಚ್ಚುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ತೂಕ ಬಿದ್ದರೆ ಸೈರನ್ ಮೊಳಗಿಸುವ ಮೂಲಕ ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸುತ್ತದೆ. ಶೀಘ್ರವೇ ಕಾರ್ಯೋನ್ಮುಖವಾಗಲು ನೆರವಾಗುತ್ತದೆ. ಈ ದ್ವಿಮುಖ ಕಾರ್ಯವಿಧಾನವು ಸಾವುನೋವುಗಳನ್ನು ತಡೆಗಟ್ಟಲು ಮಾತ್ರವಲ್ಲದೆ, ಜೀವಗಳನ್ನು ಉಳಿಸಲು ನಿರ್ಣಾಯಕ ಪ್ರತಿಕ್ರಿಯೆ ಸಮಯವನ್ನು ಒದಗಿಸಲು ಉದ್ದೇಶಿಸಲಾಗಿದೆ.