ಜನಮನ
ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದ ಮಗು :ಮುಂದುವರಿದ ರಕ್ಷಣಾ ಕಾರ್ಯ

Views: 0
ಬಿಹಾರದ ನಳಂದ ಕುಲ್ ಗ್ರಾಮದಲ್ಲಿ ಮೂರು ವರ್ಷದ ಮಗುವೊಂದು 40 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದು, ಮಗುವಿನ ರಕ್ಷಣಾ ಕಾರ್ಯ ಮುಂದುವರಿದಿದೆ.
ಭಾನುವಾರ ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದ ಶಿವಂ ಎಂಬ ಬಾಲಕನನ್ನು ರಕ್ಷಿಸುವಲ್ಲಿ ರಕ್ಷಣಾ ತಂಡಗಳು ಸ್ಥಳದಲ್ಲಿ ಜಮಾಸಿದ್ದಾರೆ.
ಶಿವಮ್ಮನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಯೇ ಆಟವಾಡುತ್ತಿದ್ದ ಮಗು ಕಾಲು ಜಾರಿ ಬೋರ್ವೆಲ್ ನಲ್ಲಿ ಬಿದ್ದಿದ್ದಾನೆ ಎಂದು ಜೊತೆಯಲ್ಲಿ ಆಟವಾಡುತ್ತಿದ್ದ ಬಾಲಕರು ತಿಳಿಸಿದ್ದಾರೆ.
ರಕ್ಷಣಾ ತಂಡದವರು ಮಗುವನ್ನು ರಕ್ಷಿಸಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದೇನೆ ಮಗು ಈಗ ಜೀವಂತವಾಗಿದೆ ಆತನ ಧ್ವನಿಯನ್ನು ಕೇಳುತ್ತಿದ್ದೇವೆ, ಉಸಿರಾಟ ನಡೆಸಲು ಬೇಕಾದ ಆಮ್ಲಜನಕವನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಎಂದು ರಕ್ಷಣಾ ತಂಡದವರು ಹೇಳಿದ್ದಾರೆ. ಮಗುವನ್ನು ಜೀವಂತ ವಾಗಿ ಹೊರತೆಗೆಯಲು ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ.