ಮಾಹಿತಿ ತಂತ್ರಜ್ಞಾನ

Paytm ನಿಂದ ರೋಗಿಗೆ ಸಹಾಯ ಮಾಡಲು ಹೋಗಿ ಉಪನ್ಯಾಸಕನಿಗೆ ಪಂಗನಾಮ !!!

"ಬುದ್ಧಿವಂತರಿಗೆ ಮಾತ್ರ. ಹಾಗಾಗಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗೆ ಹಣವನ್ನು ಸ್ವೀಕರಿಸಿ ಪೇಟಿಯಂನಿಂದ ಆಗುವ ಸಮಸ್ಯೆಯ ಬಗ್ಗೆ ಜಾಗೃತವಾಗಿರಲಿ"--ಉಪನ್ಯಾಸಕರ ಮೊಬೈಲಿಗೆ ಬಂದ ಸಂದೇಶ

Views: 0

ಖಾಸಗಿ ಆಸ್ಪತ್ರೆಯೊಂದರಲ್ಲಿ ಉಪನ್ಯಾಸಕರೊಬ್ಬರು ವೈದ್ಯರನ್ನು ಭೇಟಿಯಾಗಲು ಹೊರಟಾಗ ಉಪನ್ಯಾಸಕರು ಒಳ್ಳೆಯ ವಸ್ತ್ರ ಚಿನ್ನಾಭರಣಗಳ ಪೋಷಕನಲ್ಲಿ ಇದ್ದರು. ಆ ಸಂದರ್ಭದಲ್ಲಿ ಸೈಬರ್ ಕಳ್ಳನೊಬ್ಬ ಬೇರೆ ಬೇರೆ ಆಸ್ಪತ್ರೆಯಲ್ಲಿ ಹೋಗಿ ಹಣದ ಲಪಟಾಯಿಸುವುದು ಮಾಡುತ್ತಿದ್ದ.ಹೇಗೆಂದರೆ ಹೊಸ ತಂತ್ರ. ಆಸ್ಪತ್ರೆ ಎಂದರೆ ಎಲ್ಲರೂ ಗಂಭೀರ ವದನರಾಗಿ,ಬೇಸರದಿಂದ ಇನ್ನೂ ಕೆಲವರು ಸ್ವಲ್ಪ ಹಣವನ್ನು ಕೂಡ ಹಿಡಿದುಕೊಂಡು ತಮ್ಮದೇ ಚಿಂತೆಯಲ್ಲಿರುತ್ತಾರೆ.

ಈ ಯೋಚನೆಯಲ್ಲಿಯೇ ಈ ಹಿಂದೆ ಅದೇ ಖಾಸಗಿ ಆಸ್ಪತ್ರೆಗೆ ಹೋಗಿ ಹಣದ ವಂಚನೆಯನ್ನು ಮಾಡಿದ್ದ ವ್ಯಕ್ತಿ ಮತ್ತೊಂದು ಹಗರಣದಲ್ಲಿ ಸಿಲುಕಿ ಕೊಳ್ಳುತ್ತಾನೆ. ಆಸ್ಪತ್ರೆಯ ಹೋಟೆಲಿನಲ್ಲಿ ಉಪನ್ಯಾಸಕರ ಪರಿಚಯವನ್ನು ಮಾಡಿಕೊಂಡಿದ್ದ. ಈ ಕಳ್ಳ ಕದೀಮ ಅದೇ ದಿನ ಸಂಜೆ ಉಪನ್ಯಾಸಕರನ್ನು ಮತ್ತೆ ಭೇಟಿಯಾಗುತ್ತಾನೆ. ಆ ಕಳ್ಳ ಉಪನ್ಯಾಸಕರಲ್ಲಿ ನಾನು ಕಾಂಟ್ರಾಕ್ಟರ್ ನನ್ನ ಮೊಬೈಲ್ ಸೈಟಲ್ಲಿ ಬಿಟ್ಟು ಬಂದಿದ್ದೇನೆ. ನನ್ನಲ್ಲಿ ಕೆಲಸ ಮಾಡುವ ಹುಡುಗ ಬಿದ್ದು ಕೈ ಕಾಲು ಮುರಿದು ಕೊಂಡಿದ್ದಾನೆ. ಅವನ ಅಡ್ಮಿಟ್ ಮಾಡಲು ಹೇಳುತ್ತಿದ್ದಾರೆ. ಹಾಗಾಗಿ ನಿಮ್ಮ ಪೇಟಿಎಂ ಇದ್ರೆ ಆ ಪೇಟಿಎಂ ಗೆ ನನ್ನ ಸ್ನೇಹಿತ ಹಣ ಹಾಕುತ್ತಾನೆ. ನೀವು ನನಗೆ ಹಣ ಬಂದ ತಕ್ಷಣಕ್ಕೆ ನಿಮ್ಮಲ್ಲಿರುವ ಹಣವನ್ನು ಕೊಡಿ ಎಂದು ಹೇಳುತ್ತಾನೆ. ಉಪನ್ಯಾಸಕರಿಗೆ ಪ್ರತಿದಿನವೂ ಇಂಥದ್ದೇ ಸುಳ್ಳನ್ನು ಹೇಳುವ ಅನೇಕಾರು ವಿದ್ಯಾರ್ಥಿಗಳನ್ನು ನೋಡಿ ಅನುಭವಿಸಿರುವ ಹಿನ್ನೆಲೆಯಲ್ಲಿ ಇವನು ಮೋಸಗಾರ ಎನ್ನುವುದನ್ನು ಮನಸ್ಸಿನಲ್ಲಿ ನಿಚ್ಚೆಯಿಸಿದ್ದರು.

ಆಗ ಉಪನ್ಯಾಸಕರು ನನ್ನಲ್ಲಿ ಈಗ ಯಾವುದೇ ಹಣ ಇಲ್ಲ. ಮತ್ತೆ ಪೇಟಿಎಂನಲ್ಲಿ ಕೂಡ ಹಣ ಇಲ್ಲ. ನೀವು ಬಯಸುವುದಾದರೆ ಆ ವ್ಯಕ್ತಿಯಲ್ಲಿ ಹಣವನ್ನು ಹಾಕಲು ಹೇಳಿ ಎಂದು ಮಾನವೀಯತೆಯಿಂದ ತನ್ನ ಮೊಬೈಲ್ ನಂಬರ್ ಅನ್ನು ಕೊಡುತ್ತಾರೆ. ಮೊಬೈಲ್ ನಂಬರ್ ನ ಪಡೆದುಕೊಂಡು ಹೋದ ತಕ್ಷಣಕ್ಕೆ ಅಲ್ಲಿರುವ ಸಿಬ್ಬಂದಿ ಪರಿಚಿತರಾಗಿರುವ ಉಪನ್ಯಾಸಕರನ್ನು ಕರೆದು ನೀವು ಈಗ ಮಾತನಾಡಿದ ವ್ಯಕ್ತಿಯ ಪರಿಚಯವನ್ನು ಕೇಳಿದಾಗ ಅವರ ಪರಿಚಯ ಆಗಿದ್ದು ಅರ್ಧ ಗಂಟೆ ಮುಂಚೆ ಎಂದು ಹೇಳಿದಾಗ ಉಪನ್ಯಾಸಕನಿಗೆ ಒಳ ಮನಸ್ಸು ಜಾಗೃತಗೊಂಡಿತು. ಆಗ ಹಣ ಹಾಕುವ ವ್ಯಕ್ತಿ ಎಲ್ಲಿದ್ದಾನೆ ? ಅವನಲ್ಲಿಯೇ ಹಣ ಹಾಕಿಸಿಕೊಳ್ಳಬಹುದಲ್ಲ ? ಎಂದು ಯೋಚಿಸುತ್ತ ಅವನ ಹಿಂದೇನೆ ಹೊರಟರು. ಆಘಾತ ಅಲ್ಲೇ ಸಮೀಪದಲ್ಲಿ ಒಬ್ಬ ವ್ಯಕ್ತಿಯಲ್ಲಿ ಮಾತನಾಡಿ ಮತ್ತೆ ಆಸ್ಪತ್ರೆಯ ಆವರಣಕ್ಕೆ ಬರುತ್ತಾನೆ. ತಕ್ಷಣಕ್ಕೆ ಉಪನ್ಯಾಸಕರು ಆ ವ್ಯಕ್ತಿಯನ್ನು ಕರೆದು ನೀವು ಕರೆದುಕೊಂಡ ಬಂದಂತಹ ಆ ಫೇಸೆಂಟನ್ನು ನನಗೆ ತೋರಿಸಿ ಎಂದು ಹೇಳಿದ ಕ್ಷಣಕ್ಕೆ ಆ ವ್ಯಕ್ತಿ ತಬ್ಬಿಬ್ಬಾದ. ನಾನು ನಿಮಗೆ ಹಣ ತೆಗೆಸಿಕೊಡುತ್ತಾದರೂ ಎಟಿಎಂ ನಲ್ಲಿ ಚೆಕ್ ಮಾಡಿ ಅಥವಾ ನನ್ನ ಪೇಟಿಎಂನಲ್ಲಿ ಹಣ ಚೆಕ್ ಮಾಡಿ ನಾನು ನೀಡುತ್ತೇನೆ ಹೊರತು ನಿಮಗೆ ನಗದು ಹಣ ನೀಡಲು ಸಾಧ್ಯವಿಲ್ಲ ನಾನು ಮೊದಲೇ ತಿಳಿಸಿದಂತೆ ನನ್ನಲ್ಲಿ ಅಷ್ಟೊಂದು ಹಣವಿಲ್ಲ ಎನ್ನುವುದಾಗಿ ಹೇಳಿದಾಗ, ಆತ ಯೋಚಿಸಲು ಪ್ರಾರಂಭಿಸಿದ. ಮತ್ತೆ ನೀವು ಯಾವ ವ್ಯಕ್ತಿಯನ್ನು ಅಡ್ಮಿಶನ್ ಮಾಡಲು ಕರೆದುಕೊಂಡು ಬಂದಿದ್ದೀರೋ ಆ ವ್ಯಕ್ತಿಯನ್ನು ನನಗೆ ತೋರಿಸಿ ಎಂದು ಹೇಳಿದಾಗ,ನಿಮಗೆ ಯಾಕೆ ಅನುಮಾನ ಬಂತು ಅಂತ ಕಳ್ಳ ಕೇಳಿದಾಗ ಇಲ್ಲ ಒಳಗಡೆ ನಿಮ್ಮನ್ನು ಸಿಬ್ಬಂದಿಯವರು ಕರೆಯುತ್ತಿದ್ದಾರೆ. ನೋಡಲು ವೈಟ್ ಕಲರ್ ಜಾಬ್ ಅನ್ನು ಹೊಂದಿರುವ ವ್ಯಕ್ತಿಯಂತೆ ತೋರುತ್ತಿದ್ದ. ಆತ ನಾನು ಇಲ್ಲಿ ಸ್ವಲ್ಪ ಹೊತ್ತು ನಿಂತಿದ್ದರೆ ನನಗೆ ಸಮಸ್ಯೆ ಆಗುತ್ತದೆ ಎಂದು ತಿಳಿದು ಅಲ್ಲಿಂದ ಕಂಬಿ ಕೀಳಲು ಯೋಚನೆ ಮಾಡಿ ಓಡತೊಡ್ಕಿದ. ಆತ ಹೋದ ಬಳಿಕ ಉಪನ್ಯಾಸಕರ ಮೊಬೈಲಿಗೆ ಒಂದು ಸಂದೇಶ ಬಂದಿತ್ತು. ಬುದ್ಧಿವಂತರಿಗೆ ಮಾತ್ರ. ಹಾಗಾಗಿ ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗೆ ಹಣವನ್ನು ಸ್ವೀಕರಿಸಿ ಪೇಟಿಯಂನಿಂದ ಆಗುವ ಸಮಸ್ಯೆಯ ಬಗ್ಗೆ ಜಾಗೃತವಾಗಿರಲಿ. ಇದರಿಂದ ನಿಜವಾಗಿ ಕಷ್ಟದಲ್ಲಿದ್ದವರಿಗೆ ಕೂಡ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.ದೇವಸ್ಥಾನ,ಕಛೇರಿ, ಆಸ್ಪತ್ರೆ ಎನ್ನುವ ಭಾವನೆ ಕಳ್ಳರಿಗೆ ಇರುವುದಿಲ್ಲ. ಸೈಬರ್ ಕಳ್ಳ ಹೊರಗಿನವನಾಗದೆ ಶುದ್ಧ ಕುಂದಾಪುರ ಕನ್ನಡವನ್ನಾಡುತ್ತಿದ್ದ.

-ಮಂಜುನಾಥ.ಕೆಎಸ್

Related Articles

Back to top button