ಸಾಮಾಜಿಕ

ನಾಗರ ಹಾವಿಗೆ ಜೀವದಾನ

Views: 17

ಕುಂದಾಪುರ : ಜೆಸಿಬಿಗೆ ಸಿಕ್ಕಿದ, ನಾಯಿ ಕಚ್ಚಿ ತೀವ೯ ಗಾಯ ಗೊಂಡಿರುವ ನಾಗರಹಾವಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿ, ಪ್ರಕ್ರೃತಿಯ ಮಡಿಲಿಗೆ ಸೇರಿಸುವ ಪರಿಸರ ಸ್ನೇಹಿ ಕೋಟೇಶ್ವರದ ಉರಗತಜ್ಞ ಶ್ರೀಧರ ಐತಾಳ್ ಪೃಕ್ರತಿ ನಿಮಿ೯ಸಿದ ಸಂಕೀಣ೯ ಜೀವಜಾಲದ ಮೇಲೆ ಮನುಷ್ಯ ತನ್ನ ಪ್ರಭುತ್ವ ಸಾಧಿಸಲು ಹೊರಟಾಗ ಈ ಭೂಮಿಯ ಮೇಲೆ ವಾಸಿಸುವ ಸಕಲ ಜೀವಿಗಳ ಆರೋಗ್ಯಕ್ಕೂ ಅಪಾಯವಿದೆ. ಹೆದ್ದಾರಿ ಆಗಲಿಕರಣ, ಅರಣ್ಯ ಕೃಷಿಭೂಮಿಯಲ್ಲಿ ಮನೆ, ವಾಣಿಜ್ಯ ಸಂಕೀರ್ಣಗಳು ತಲೆಎತ್ತಿದ್ದರಿಂದ ಅವೆಷ್ಟೋ ಪ್ರಾಣಿಪಕ್ಷಿಗಳು ಹೆದರಿ ನಾಡಿಗೆ ಬರುತ್ತಿರುವುದು ಸಹಜ.

ಇಂತಹ ಸಂದರ್ಭದಲ್ಲಿ ಕುಂದಾಪುರದ ಮನೆಯ ಆವರಣಕ್ಕೆ ನಾಗರ ಹಾವು ಪ್ರವೇಶ ಮಾಡಿದ್ದು,  ಅಲ್ಲಿಯೇ ಇದ್ದ ನಾಯಿಯೊಂದು ಹಾವಿನ ಮೇಲೆ  ದಾಳಿ ನಡೆಸಿ ಗಾಯಗೊಳಿಸಿತ್ತು.  ಸಂಪೂಣ೯ ಗಾಯಗೊಂಡಿದ್ದ ಹಾವನ್ನು ಅಲ್ಲಿಯೇ ಹತ್ತಿರದ ರಿಕ್ಷಾ ಚಾಲಕರು ಜಾಗೃತೆಯಿಂದ ಹಾವನ್ನು ಬಕೆಟ್ನ ಒಳಗೆ ಹಾಕಿ ಹೆಚ್ಚಿನ ಚಿಕಿತ್ಸೆಗೆ ಉರಗತಜ್ಞ ಶ್ರೀಧರ ಐತಾಳ್ರ ಮನೆಗೆ ತಂದರು. ಐತಾಳರು ಹಾವಿಗೆ ಬಕೆಟ್ಒಳಗೆ ಚಿಕಿತ್ಸೆ ನೀಡುವುದರೊಂದಿಗೆ ಹಾಲು, ಮೊಟ್ಟೆ, ಆಹಾರ ನೀಡಿ ಆರೈಕೆ ಮಾಡಿದರು.  ಒಂದೇ ವಾರದಲ್ಲಿ ಹಾವು ಚಿಕಿತ್ಸೆಗೆ ಸ್ಪಂದಿಸಿ,  ಸಂಪೂರ್ಣ ಗುಣಮುಖಗೊಂಡಿದೆ. ಅವರ ಮನೆಯಂಗಳದಲ್ಲಿ ಹಾವು ಹರಿದಾಡಲು ಪ್ರಾರಂಭಿಸಿದಾಗ ಪ್ರಕೃತಿಯ ಮಡಿಲಿಗೆ ಸೇರಿಸಿದ್ದಾರೆ ಐತಾಳರು ಸುಮಾರು ಐದುಸಾವಿರಕ್ಕಿಂತಲೂ ಹೆಚ್ಚು ನಾನಾ ಜಾತಿಯ ಹಾವುಗಳನ್ನು ಹಿಡಿದಿರುದಲ್ಲದೆ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಹಾವುಗಳ ರಕ್ಷಣೆ,  ವಾಹನ ಅಪಘಾತ,  ಮಣ್ಣು  ತೆಗೆಯುವ ಯಂತ್ರಗಳಿಗೆ ಸಿಕ್ಕಿ ಗಾಯಗೊಂಡ ಅದೇಷ್ಟೋ ಹಾವುಗಳಿಗೆ ಚಿಕಿತ್ಸೆ ನೀಡಿ ಸಂರಕ್ಷಿಸಿದ್ದಾರೆ.  ಸತ್ತ ನಾಗರಹಾವುಗಳಿಗೂ ಸಂಸ್ಕಾರ ನಡೆಸಿದ್ದಾರೆ.  ಈ ಕೆಲಸಗಳಿಗೆ ಬೇಕಾಗುವ ಹೂ,  ಹಣ್ಣು,  ಪೂಜಾಸಾಮಗ್ರಿಗಳನ್ನು ಸ್ಥಳೀಯರು ಒದಗಿಸುತ್ತಾರೆ. ನಮ್ಮಲ್ಲಿಯೇ ಯೋಗ್ಯ ಚಿಕಿತ್ಸೆಗೆ ಹಾಗೂ ಆರೈಕೆಗೆ ಸರಕಾರದವರು ಉರಗವನ ನಿಮಿ೯ಸುವಷ್ಷು ಸ್ಥಳ ಹಾಗೂ ಸಂಘಸಂಸ್ಥೆಗಳು ನೆರವು ನೀಡಿದರೆ ವಿವಿಧ ಜಾತಿಯ ಹಾವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ.

ಶ್ರೀಧರ ಐತಾಳ್ ಉರಗತಜ್ಞರು 

ಸಂಪಕ೯: 9341608630

–ಸುಧಾಕರವಕ್ವಾಡಿ

 

Related Articles

Back to top button