ಸಾಂಸ್ಕೃತಿಕ

ಕೆ. ಕೆ. ಕಾಳಾವರ್ಕರ್ ರವರ ಮೂರು ಕೃತಿ ಲೋಕಾಪ೯ಣೆ ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ

Views: 19

ಕುಂದಾಪುರ : ಕಾಳಾವರ ಗರಗದ್ದೆ ಶ್ರೀ ಪಂಜುಲಿ೯ ಹಾಗೂ ಪರಿವಾರ ದೈವಸ್ಥಾನದ ದ್ವಿತೀಯ ಪ್ರತಿಷ್ಠಾ ವದ೯ಂತಿ ಪ್ರಯುಕ್ತ ಶ್ರೀ ಹಟ್ಟಿಯಂಗಡಿ ಮೇಳದವರಿಂದ ಕೆ. ಕೆ. ಕಾಳಾವಕ೯ರ್ ರವರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಾಲ ನಾಟಕ ಆಧಾರಿತ ನಾಗಾಂಬಿಕೆ ಯಕ್ಷಗಾನ ಪ್ರದಶ೯ನ ವೇದಿಕೆಯಲ್ಲಿ ದಲಿತ ಸಾಹಿತಿ ಹರಿದಾಸ್ ಕಾಳಾವರ್ಕರ್ ರವರ ಮಂಗಳೂರು ವಿ. ವಿ. ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಅಳವಡಿಸಿರುವ ನುಡಿಶಿಲ್ಪ ಆಧಾರಿತ ಬೀದಿ ಮಕ್ಕಳು ನಾಟಕ ಕೃತಿಯನ್ನು ಸುಧಾಕರ ವಕ್ವಾಡಿ, ಅವರು ನಡೆದು ಬಂದ ಮೂರು ತಲೆಮಾರಿನ ಸ್ಥಿತ ಕಾದಂಬರಿಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ, ಬೇಡರ ಕಥೆಯಾಧರಿತ ದೈವಸಂಕಲ್ಪ ಯಕ್ಷಗಾನ ಪ್ರಸಂಗವನ್ನು ಯಕ್ಷಗಾನದ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರು ಬಿಡುಗಡೆಗೊಳಿಸಿದರು.
      ಇದೇ ಸಂದಭ೯ದಲ್ಲಿ 57 ವಷ೯ಗಳಿಂದ ಕಲಾ ಸೇವೆ ನೀಡುತ್ತಿರುವ ಶ್ರೀ ಹಟ್ಟಿಯಂಗಡಿ ಮೇಳದ ಹಿರಿಯ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ,36 ವಷ೯ಗಳಿಂದ ಕಲಾ ಸೇವೆಯಲ್ಲಿರುವ ಸ್ತ್ರೀ ಪಾತ್ರಧಾರಿ ಉಳ್ಳೂರು ಶಂಕರ ದೇವಾಡಿಗ, ಮೇಳದ ಪ್ರಧಾನ ಭಾಗವತ ಸುಧೀರ್ ಭಟ್ ಪೆಡೂ೯ರು, ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿಸಲಾಯಿತು. ಸುಧಾಕರ ವಕ್ವಾಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ರಘವೀರ್ ಕಾಯ೯ಕೃಮ ಸಂಯೋಜಿಸಿದ್ದರು.

Related Articles

Back to top button