ಮಾಹಿತಿ ತಂತ್ರಜ್ಞಾನ

Chandrayaan-3: ಚಂದ್ರನ ಮೇಲೆ ಮನುಷ್ಯರು: ಇಸ್ರೋ ಸಾಧನೆಗೆ ಸಲಾಂ!

Views: 0

ಚಂದ್ರನ ಮೇಲೆ ಮನೆ ಮಾಡಬೇಕು, ಚಂದ್ರನಲ್ಲಿ ಮನುಷ್ಯರು ಬಾಳಿ ಬದುಕಬೇಕು ಎಂಬ ಕನಸು ಹಲವು ಶತಮಾನಗಳದ್ದು. ಆದ್ರೆ ಈ ಆಸೆ ಈಡೇರಿಸಲು ಇಲ್ಲಿಯ ತನಕ ಮನುಷ್ಯ ಮಾಡಿದ ಪ್ರಯತ್ನಗಳು ವಿಫಲವಾಗಿ ಹೋದವು. ಈಗ ಭಾರತದ ಮೂಲಕ ಆ ಆಸೆ ಕೂಡ ಈಡೇರಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ನೆಲೆಯೂರಿದೆ. ಇಷ್ಟು ಮಾತ್ರವಲ್ಲದೆ, ಇದೇ ಜಾಗದಲ್ಲಿ ಮನುಷ್ಯರು ಬದುಕಿ ಉಳಿಯಲು ಬೇಕಾದ ಅತ್ಯಗತ್ಯ ವಸ್ತು ಸಿಕ್ಕಿಬಿಟ್ಟಿದೆ.

ಭೂಮಿ ತಾಯಿಗೆ ದೇವರ ಸ್ಥಾನ ನೀಡಿದ್ದಾನೆ ಮನುಷ್ಯ. ಹಿಂದೂ ಸಂಪ್ರದಾಯದ ಜೊತೆ ಬೇರೆ ಬೇರೆ ಧರ್ಮದಲ್ಲೂ ಭೂಮಿಗೆ ದೇವರ ಸ್ಥಾನವಿದೆ. ಏಕೆಂದ್ರೆ ಇಡೀ ಬ್ರಹ್ಮಾಂಡದಲ್ಲಿ ಮನುಷ್ಯರು ಬದುಕಿ ಉಳಿದಿರುವ ಏಕೈಕ ಗ್ರಹ ಭೂಮಿ. ಹೀಗಾಗಿಯೇ ಭೂಮಿ ತಾಯಿಯ ಬಗ್ಗೆ ಅಪಾರವಾದ ಗೌರವ. ಇಂತಿಪ್ಪ ಮನುಷ್ಯ ಬದುಕಿ ಉಳಿಯಲು ನೀರು ಗಾಳಿ ಮತ್ತು ಆಹಾರ ಪ್ರಮುಖ ಅಗತ್ಯತೆ ಪಟ್ಟಿಯಲ್ಲಿ ಇವೆ. ಗಾಳಿ ಅಂದ್ರೆ ಆಮ್ಲಜನಕ ಇಲ್ಲದೆ ಮನುಷ್ಯ ಕೆಲ ನಿಮಿಷದಲ್ಲಿ ಮೃತಪಡುತ್ತಾನೆ. ಹೀಗಿದ್ದಾಗಲೇ ಚಂದ್ರನ ಮೇಲೆ ಭಾರತ ಆಮ್ಲಜನಕ ಕಂಡುಹಿಡಿದಿದೆ. ಇದರ ಜೊತೆಗೆ ಇನ್ನೂ ಹಲವು ಧಾತುಗಳು ಸಿಕ್ಕಿವೆ.

ಭವಿಷ್ಯದಲ್ಲಿ ಚಂದ್ರನ ಮೇಲೆ ಮನುಷ್ಯ!

ಹೌದು ಭಾರತದ ಇಸ್ರೋ ಸಂಸ್ಥೆ ಇದೀಗ ಮಾಡಿರುವ ಸಾಧನೆಯ ಫಲವಾಗಿ ಭವಿಷ್ಯದಲ್ಲಿ ಮನುಷ್ಯ ಚಂದ್ರನ ಮೇಲೆ ವಾಸಿಸುವುದು ಪಕ್ಕಾ. ಯಾಕಂದ್ರೆ ಮನುಷ್ಯನ ಅಗತ್ಯ ವಸ್ತು ಎಂದು ಪರಿಗಣಿಸುವ ಆಮ್ಲಜನಕ ಅಥವಾ ಆಕ್ಸಿಜನ್ ಇದೀಗ ಚಂದ್ರನ ದಕ್ಷಿಣ ಧ್ರುವದಲ್ಲಿ ಸಿಕ್ಕಿದೆ. ಇದಷ್ಟೇ ಅಲ್ಲದೆ ಭೂಮಿ ಮೇಲೆ ಕಾಣಿಸುವ ಹಲವು ಧಾತುಗಳನ್ನ ಕೂಡ ಇದೇ ಇಸ್ರೋ ಪತ್ತೆ ಮಾಡಿದೆ. ತನ್ನ ಲ್ಯಾಂಡರ್ ವಿಕ್ರಮ್ ಹಾಗೂ ತನ್ನ ರೋವರ್ ಪ್ರಗ್ಯಾನ್‌ನ ಮೂಲಕ ಇಂಥ ಮಹತ್ವದ ಸಾಧನೆ ಮಾಡಿದೆ ಭಾರತ.

Related Articles

Back to top button