ಆರೋಗ್ಯ

BPL ಕಾರ್ಡುದಾರರಿಗೆ ಬಿಗ್ ಶಾಕ್..! ಅನರ್ಹ ಬಿಪಿಎಲ್‌ನವರಿಗೆ ಇನ್ಮುಂದೆ ಎಪಿಎಲ್?

Views: 254

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರು ಆಹಾರ ಧಾನ್ಯಗಳನ್ನು ಪಡೆಯುತ್ತಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಅನರ್ಹ ಪಡಿತರದಾರರನ್ನು ಎಪಿಎಲ್‌ಗೆ ಸೇರ್ಪಡೆ ಮಾಡಲು ವಿಪಕ್ಷ ಸದಸ್ಯರು ಒಪ್ಪಿಗೆ ನೀಡಿದರೆ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಎನ್.ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರಿಸಿದರು.

ಈ ಹಿಂದೆ ಬಿಪಿಎಲ್ ಕಾರ್ಡ್‌ಲ್ಲಿದ್ದ ಫಲಾನುಭವಿಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲು ಇಲಾಖೆ ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಯಿತು, ಸದನದ ಸದಸ್ಯರೆಲ್ಲರೂ ಒಪ್ಪಿಗೆಯನ್ನು ಸೂಚಿಸಿದರೆ ಫಲಾನುಭವಿಗಳನ್ನು ವರ್ಗಾವಣೆ ಮಾಡಲಾಗುವುದು ಎಂದರು.

ಅನರ್ಹ ಬಿಪಿಎಲ್ ಕಾರ್ಡುದಾರು ಸರಕಾರದ ಆಹಾರಧಾನ್ಯಗಳನ್ನು ಪಡೆಯುತ್ತಿರುವುದು ಹೊರೆಯಾಗುತ್ತದೆ. ಇದನ್ನು ಮಾಡುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ, ಕೆಲವರು ಅರ್ಹ ಫಲಾನುಭವಿಗಳನ್ನು ತೆಗೆದು ಹಾಕುತ್ತಾರೆ. ಎಂದು ಅಪಪ್ರಚಾರ ನಡೆಸುತ್ತಾರೆ. ಇದಕ್ಕೆ ಸದಸ್ಯರು ಅವಕಾಶ ಮಾಡಿಕೊಡಬಾರದು. ನಿಮ್ಮ ಒಪ್ಪಿಗೆ ಇದ್ದರೆ ಅನರ್ಹರನ್ನು ತೆಗೆದು ಹಾಕಲು ಸರಕಾರ ಸಿದ್ಧವಿದೆ ಎಂದು ಹೇಳಿದರು.

ರಾಜ್ಯದಲ್ಲೇ ಅತೀ ಹೆಚ್ಚು ಬಿಪಿಎಲ್‌ ಕಾರ್ಡು ದಾರರು

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೆ ಅತಿ ಹೆಚ್ಚು ಬಿಪಿಎಲ್ ಫಲಾನುಭವಿಗಳಿದ್ದಾರೆ. ತಮಿಳುನಾಡು ಶೇ.50, ಕೇರಳ ಶೇ.45, ತೆಲಂಗಾಣ ಶೇ.50, ಆಂಧ್ರಪ್ರದೇಶ ಶೇ.50, ನಮಲ್ಲಿ ಮಾತ್ರ ಶೇ.70 ರಿಂದ 75 ರಷ್ಟು ಬಿಪಿಎಲ್ ಫಲಾನುಭವಿಗಳು ಇದ್ದಾರೆ ಎಂದು ಅಂಕಿ ಸಂಖ್ಯೆಗಳ ವಿವರಣೆ ನೀಡಿದರು. ಓರ್ವ ಬಿಪಿಎಲ್ ಫಲಾನುಭವಿ ಎಂದು ಗುರುತಿಸಬೇಕಾದರೆ ಕೇಂದ್ರ ಸರಕಾರ 11 ಹಾಗೂ ರಾಜ್ಯ ಸರಕಾರ 5 ಮಾನದಂಡಗಳನ್ನು ನಿಗದಿಪಡಿಸಿದೆ. ಈ ಮಾನದಂಡವನ್ನು ನಾವು ಪಾಲನೆ ಮಾಡಿದರೆ ಬಿಪಿಎಲ್ ಫಲಾನುಭವಿಗಳ ಸಂಖ್ಯೆ 15ಕ್ಕೆ ಇಳಿಕೆಯಾಗುತ್ತದೆ ಎಂದರು. ರಾಜ್ಯದಲ್ಲಿ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಇಲಾಖೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. 2023-24ರಲ್ಲಿ 404 ಪ್ರಕರಣಗಳು – 20 ಕೋಟಿ ರು.ದಂಡ, 2024-25 ರಲ್ಲಿ 505 ಪ್ರಕರಣಗಳು-10 ಕೋಟಿ ರು. ದಂಡ, ಪ್ರಸಕ್ತ ವರ್ಷ 287 ಪ್ರಕರಣಗಳು 4 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

Related Articles

Back to top button