ಸಾಮಾಜಿಕ
ನ.1 ರಂದು ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರಿನಲ್ಲಿ ವಧು-ವರಾನ್ವೇಷಣಾ ಸಮಾವೇಶ

Views: 35

ಬೃಹ್ಮಾವರ: ಉಡುಪಿ ಜಿಲ್ಲೆಯ ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರಿನ ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ(ರಿ) ಮಂಗಳೂರು ಇದರ ಪರಿಣಯ ವೇದಿಕೆ ಆಶ್ರಯದಲ್ಲಿ ನವೆಂಬರ್ 1 ರಂದು ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರು ದೇವಳದಲ್ಲಿ ಬೆಳಿಗ್ಗೆ 9:00 ರಿಂದ ಅಪರಾಹ್ನ 3 ಗಂಟೆಯವರೆಗೆ ವಧು- ವರಾನ್ವೇಷಣೆ ಸಮಾವೇಶ ನಡೆಯಲಿದೆ ಎಂದು ಬಾರಕೂರು ದೇವಳದ ಆಡಳಿತ ಮೊಕ್ತೇಸರರಾದ ಡಾ.ಸಿ ಜಯರಾಮ ಶೆಟ್ಟಿಗಾರ್ ಹಾಗೂ ಸಮಾವೇಶದ ಸಂಚಾಲಕರಾದ ಡಾ. ಶಿವಪ್ರಸಾದ್ ಶೆಟ್ಟಿಗಾರ್ ಅವರು ಜಂಟೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಕರಾವಳಿ ಪದ್ಮಶಾಲಿಗರ 16 ದೇವಸ್ಥಾನದ ವ್ಯಾಪ್ತಿಯ ಸ್ವ ಸಮಾಜದ ವಿವಾಹ ಅಪೇಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.








