ನ.1 ರಂದು ಬಾರಕೂರಿನಲ್ಲಿ ಪದ್ಮಶಾಲಿ ವಧು- ವರಾನ್ವೇಷಣಾ ಸಮಾವೇಶ

Views: 45
ಕರಾವಳಿ ಕರ್ನಾಟಕದ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರಕೂರು ಶ್ರೀಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ: 01.11.2023 ರಂದು ಬುಧವಾರ ಪೂರ್ವಾಹ್ನ 9:00 ರಿಂದ ಅಪರಾಹ್ನ 3:00 ಘಂಟೆಯ ವರೆಗೆ “ಪದ್ಮಶಾಲಿ ವಧು- ವರಾನ್ವೇಷಣಾ ಸಮಾವೇಶ” ನಡೆಯಲಿದೆ.
ಸಮಾಜ ಬಾಂಧವರೇ,
ಉತ್ತಮ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯರು ಅನ್ಯೋನ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸಮಾಜವು ವಿವಾಹ ಅಪೇಕ್ಷಿತ ಯುವಕ- ಯುವತಿಯರನ್ನು ಹಾಗೂ ಅವರ ಕುಟುಂಬಿಕರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಾಗ ಉತ್ತಮ ಸಂಬಂಧಗಳು ಕೂಡಿ ಬರಲು ಸಾಧ್ಯ.
ಸಮಾಜದಲ್ಲಿ ಮದುವೆಯ ವಯಸ್ಸಿಗೆ ಬಂದಿರುವ ಅನೇಕ ಯುವಕ- ಯುವತಿಯರಿದ್ದರೂ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಸೂಕ್ತ ಸಮಯದಲ್ಲಿ ವಿವಾಹವಾಗದೆ ಅನೇಕ ರೀತಿಯ ಯಾತನೆಗೆ ಒಳಗಾಗಿರುತ್ತಾರೆ ಮತ್ತು ಇವರು ಕೌಟುಂಬಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುತ್ತಾರೆ.
ವಯಸ್ಸು ,ವಿದ್ಯಾರ್ಹತೆ, ಉದ್ಯೋಗ ಇನ್ನಿತರ ವಿಷಯಗಳಿಂದಾಗಿ ತಮ್ಮ ಅಪೇಕ್ಷೆಯ ವಧು- ವರಾ ನ್ವೇಷಣೆ ಫಲಕಾರಿಯಾಗದೆ ಇರುವುದರಿಂದ ಕೆಲವರಂತೂ ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಂದ ದೂರ ಉಳಿದುಕೊಂಡು ವಿವಾಹದ ಕುರಿತು ನಿರಾಶ ಭಾವನೆ ಹೊಂದಿರುತ್ತಾರೆ.
ಈ ನಿಟ್ಟಿನಲ್ಲಿ ಕರಾವಳಿ ಪದ್ಮಶಾಲಿಗರ ಮೂಲ ದೇವಸ್ಥಾನ ಬಾರಕೂರಿನಲ್ಲಿ ದಿನಾಂಕ: 01.11.2023ರ ಬುಧವಾರ ಪೂರ್ವಾಹ್ನ 9:00 ಗಂಟೆಗೆ ದ್ವಿತೀಯ “ಪದ್ಮಶಾಲಿ ವಧು- ವರಾನ್ವೇಷಣೆ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ.
ಕರಾವಳಿಯ 16 ಪದ್ಮಶಾಲಿಗರ ದೇವಸ್ಥಾನದ ಸದಸ್ಯರಾಗಿರುವ ಕರಾವಳಿ- ದೇಶ -ವಿದೇಶಗಳಲ್ಲಿ ವಾಸಿಸುವ ಎಲ್ಲಾ ಪದ್ಮಶಾಲಿ ವಿವಾಹಪ್ರೇಕ್ಷಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ಅನುರೂಪವಾದ ವಧು ವರರನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.
ತಮ್ಮೆಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸುವ,
ಡಾ. ಜಯರಾಮ್ ಶೆಟ್ಟಿಗಾರ್ ಆಡಳಿತ ಮೊಕ್ತೇಸರರು
ಶ್ರೀ ಬಿ. ಶ್ರೀನಿವಾಸ್ ಶೆಟ್ಟಿಗಾರ್ ಅಧ್ಯಕ್ಷರು ಅಭಿವೃದ್ಧಿ ಸಮಿತಿ/ ಟ್ರಸ್ಟ್
ಶ್ರೀ.ಹೆಚ್.ಎ.ಗೋಪಾಲ್ ಅಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ/ ಸಂಚಾಲಕರು ಪದ್ಮಶಾಲಿ ವಧು- ವರಾನ್ವೇಷಣಾ ಸಮಾವೇಶ
ಡಾ. ಶಿವಪ್ರಸಾದ್ ಶೆಟ್ಟಿಗಾರ್ ಸಂಚಾಲಕರು ಪದ್ಮಶಾಲಿ ವಧು-ವರಾನ್ವೇಷಣಾ ಸಮಾವೇಶ
ಶ್ರೀ ಆನಂದ ಶೆಟ್ಟಿಗಾರ್ ಅಧ್ಯಕ್ಷರು ಸಂಘಟನಾ ಸಮಿತಿ
ಶ್ರೀಮತಿ ಆಶಾಲತಾ ವಿಠ್ಠಲ್ ಶೆಟ್ಟಿಗಾರ್. ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ
ವಿವರಗಳಿಗಾಗಿ ಮತ್ತು ನೋಂದಣಿ ಅರ್ಜಿಗಾಗಿ ಸಂಪರ್ಕಿಸಿರಿ;
ಡಾ. ಶಿವಪ್ರಸಾದ್ ಶೆಟ್ಟಿಗಾರ್ : 9113956183
ಭಾಸ್ಕರ್ ಶೆಟ್ಟಿಗಾರ ಸಾಸ್ತಾನ,ಕಾರ್ಯದರ್ಶಿ: 9449084136
ವಿವಾಹಪೇಕ್ಷಿಗಳೇ ಬನ್ನಿ,
ಸಮಾವೇಶದಲ್ಲಿ ಭಾಗವಹಿಸಿ
ಅನುರೂಪ ಸಂಗಾತಿಯ ಆಯ್ಕೆಗಿದು ಸದಾವಕಾಶ








