ಚಂದ್ರಯಾನ-3 ಉಡಾವಣೆ ಯಶಸ್ಸಿನ ಜೊತೆಗಿದ್ದ ಇಸ್ರೋ ವಿಜ್ಞಾನಿ ನಿಧನ

Views: 0
ಚಂದ್ರಯಾನ-3 ಉಡಾವಣೆ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ನಿಧನರಾಗಿದ್ದಾರೆ. ಭಾರತದ ಸ್ಥಾನಮಾನವನ್ನು ಉತ್ತಂಗಕ್ಕೇರಿಸಿದ ಚಂದ್ರಯಾನ-3 ಉಡಾವಣೆ ಸಮಯದಲ್ಲಿ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ಕೊನೆಯುಸಿರೆಳೆದಿದ್ದಾರೆ.
ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆಗಾಗಿ ಕ್ಷಣಗಣನೆಯಲ್ಲಿ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಇವರು ಕೊನೆಯ ಕ್ಷಣದವರೆಗೂ ದೇಶದ ಮೂರನೇ ಚಂದ್ರಯಾನ-3ರ ಉಡಾವಣೆಯಲ್ಲಿ ಹಿನ್ನೆಲೆ ಧ್ವನಿ ನೀಡಿದ್ದರು.ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು.ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ (LM) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿತು. ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶ ಭಾಗರವಾಗಿದೆ. ಜೊತೆಗೆ ಭಾರತ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಯಿತು. ಪ್ರಗ್ಯಾನ್ ರೋವರ್ 14 ದಿನಗಳವರೆಗೆ ಕೆಲಸ ಮಾಡಲಿದೆ.ರೋವರ್ ಎರಡು ಪೇಲೋಡ್‌ಗಳನ್ನು ಹೊಂದಿದೆ, ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS). ಲ್ಯಾಂಡರ್ ಮೂಲಕ ಭೂಮಿಗೆ ಡೇಟಾವನ್ನು ರವಾನಿಸುವ ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ.ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಮೌಲ್ಯಯುತವಾದ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಲು ಒಟ್ಟಿಗೆ ಕೆಲಸ ಮಾಡುತ್ತಿವೆ. APXS ಮತ್ತು LIBS ಪೇಲೋಡ್‌ಗಳನ್ನು ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಮತ್ತು ಖನಿಜ ಸಂಯೋಜನೆಯನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾಗಿದೆ.