ಸೆ. 2 ಸೂರ್ಯನ ಅಧ್ಯಯನಕ್ಕೆ ಆದಿತ್ಯ-L1 ಉಡಾವಣೆ

Views: 0
ಚಂದ್ರಯಾನ-3 ಯಶಸ್ಸಿನ ಬೆನ್ನಿಗೆ ಇಸ್ರೋ ಸೂರ್ಯನ ಸಂಶೋಧನೆಯತ್ತ ಗುರಿ ಇಟ್ಟುಕೊಂಡಿದೆ. ಸೂರ್ಯನನ್ನು ಅಧ್ಯಯನ ಮಾಡಲಿರುವ ಆದಿತ್ಯ-L1 ಉಪಗ್ರಹವನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡುವುದಾಗಿ ಇಸ್ರೋ ಅಧ್ಯಕ್ಷ ಸೋಮನಾಥ ಪ್ರಕಟಿಸಿದ್ದಾರೆ.
ಗುರುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಸೋಮನಾಥ್ ಆದಿತ್ಯ-L1 ರ ಉಪಗ್ರಹ ನಿರ್ಮಾಣ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಸಂಪೂರ್ಣಗೊಂಡಿದೆ. ಇದನ್ನು ಶ್ರೀಹರಿ ಕೋಟದ ಬಾಹ್ಯಾಕಾಶ ಉಡ್ಡಯನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಆದಿತ್ಯ-L1 ಒಟ್ಟು 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಲಿದ್ದು ಇದಕ್ಕೆ 127 ದಿನಗಳು ಬೇಕಾಗುತ್ತದೆ ಎಂದು ಅಹ್ಮದಾಬಾದ್ ಇಸ್ರೋ ಕೇಂದ್ರದ ನಿರ್ದೇಶಕ ನಿತಿನ್ ಎಂ ದೇಸಾಯಿ ತಿಳಿಸಿದ್ದಾರೆ.
ಸೂರ್ಯನ ಮೇಲೆ ಮಾತ್ರವಲ್ಲ ಶುಕ್ರ, ಮತ್ತೊಮ್ಮೆ ಮಂಗಳ ಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಪಯಣ ಬೆಳೆಸುವುದು. ಹೀಗೆ ಹಲವು ಯೋಜನೆಗಳನ್ನು ಮುಂದೊಂದು ದಶಕದಲ್ಲಿ ಕಾರ್ಯರೂಪಕ್ಕೆ ತರುವ ಗುರಿಯನ್ನು ಭಾರತದ ವಿಜ್ಞಾನಿಗಳು ಹೊಂದಿದ್ದಾರೆ.
ಆದಿತ್ಯ-L1 ವಿಶೇಷವೇನು?
ನಮ್ಮ ಸೌರವ್ಯೂಹದ ಕೇಂದ್ರವಾದ ನಕ್ಷತ್ರ ಸೂರ್ಯ ನ ಅಧ್ಯಯನ ನಡೆಸಿ ವಿಶೇಷ ಮಾಹಿತಿಗಳನ್ನು ಆದಿತ್ಯ ನೀಡಲಿದೆ.
ಬಾಹ್ಯಾಕಾಶ ಹಾಗೂ ಭೂಮಿಯ ವಾತಾವರಣದ ಮೇಲೆ ಸೌರ ಚಟುವಟಿಕೆಗಳ ಪ್ರಭಾವವನ್ನು ತಿಳಿಯುವುದು.
ನೌಕೆಯಿಂದ ಸೂರ್ಯನ ಮೇಲೆ ಸತತ ಕಣ್ಣಿಡಲು ಸಾಧ್ಯ
ಇದರೊಂದಿಗೆ ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿರುವ ಜಗತ್ತಿನ ಕೆಲವೇ ದೇಶಗಳ ಸಾಲಿಗೆ ಭಾರತವು ಸೇರಿಕೊಳ್ಳಲಿದೆ.