ಮಾಹಿತಿ ತಂತ್ರಜ್ಞಾನ
ಚಂದ್ರಯಾನ ವ್ಯಂಗ್ಯ ಪ್ರಕಾಶ್ ರೈ ವಿರುದ್ಧ ದೂರು ದಾಖಲು

Views: 0
ಚಂದ್ರಯಾನ-3 ಬಗ್ಗೆ ವ್ಯಂಗ್ಯ ಮಾಡಿದ್ದ ಹಿರಿಯ ನಟ ನಿರ್ದೇಶಕ ಪ್ರಕಾಶ್ ರೈ ವಿರುದ್ಧ ಬಾಗಲಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾಗಲಕೋಟೆ ಬನಹಟ್ಟಿಯ ಠಾಣೆಯಲ್ಲಿ ಹಿಂದೂ ಸಂಘಟನೆ ಮುಖಂಡರು ಪ್ರಕಾಶ್ ರೈ ವಿರುದ್ಧ ದೂರು ದಾಖಲಿಸಿದ್ದಾರೆ.
ಚಂದ್ರಯಾನವನ್ನು ವ್ಯಂಗ್ಯ ಮಾಡುವ ಮೂಲಕ ದೇಶಕ್ಕೆ ಅಪಮಾನ ಮಾಡಿರುವ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.
ಇಸ್ರೋ ಮಾಜಿ ಅಧ್ಯಕ್ಷ ಶಿವನ್ ಅವರನ್ನು ಹೋಲುವಂತಹ ವ್ಯಕ್ತಿ ಒಬ್ಬರು ಚಂದ್ರನ ಮೇಲಿಂದ ಚಹಾ ಸುರಿಯುತ್ತಿರುವ ವ್ಯಂಗ್ಯ ಚಿತ್ರದ ಫೋಟೋವನ್ನು ಹಾಕಿ ಬ್ರೇಕಿಂಗ್ ನ್ಯೂಸ್…. ಚಂದ್ರರ ಅಂಗಳದಲ್ಲಿ…ವಿಕ್ರಂ ಲ್ಯಾಂಡ್ ನಿಂದ ಮೊದಲ ಚಿತ್ರ ವಾವ್.. ಎಂದು ಬರೆದುಕೊಂಡಿದ್ದರು.
ವಿಕ್ರಂ ಲ್ಯಾಂಡ್ ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ಇಳಿಯಲಿ ಎಂದು ದೇಶಾದ್ಯಂತ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಚಂದ್ರಯಾನದ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವುದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.