ಕುಂದಾಪುರ: ಗಣೇಶೋತ್ಸವ ಆಚರಣೆ ವೇಳೆ ಮುಂಜಾಗ್ರತಾ ಕ್ರಮಕ್ಕೆ ಸೂಚನೆ
Views: 24
ಕನ್ನಡ ಕರಾವಳಿ ಸುದ್ದಿ: ಗಣೇಶೋತ್ಸವ ಆಚರಣೆ ವೇಳೆ ಸಂಘಟಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕುಂದಾಪುರದ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ವತಿಯಿಂದ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ.
*ನೂಕುನುಗ್ಗಲು ಆಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನೇಮಿಸಿ. ಒಂದಕ್ಕಿಂತ ಹೆಚ್ಚು ದಿನ ಗಣಪತಿ ಕೂರಿಸುವಲ್ಲಿ ದಿನದ 24 ಗಂಟೆ ಕಾಯಲು ಸಮಿತಿ ಸದಸ್ಯರನ್ನು ನೇಮಿಸುವುದಲ್ಲದೆ ಸಿಸಿ ಕೆಮರಾ ಅಳವಡಿಸಬೇಕು.
*ನಿಗದಿಗಿಂತ ಹೆಚ್ಚಿನ ಎತ್ತರದ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.
*ಸಾರ್ವಜನಿಕರು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪೆಂಡಾಲ್ ಹಾಕಬೇಕು.
*ಪ್ಲೆಕ್ಸ್/ಬ್ಯಾನರ್/ಕಟೌಟ್ ಹಾಕಲು ಸ್ಥಳೀಯ ಪ್ರಾಧಿಕಾರದಿಂದ ಮೊದಲೇ ಅನುಮತಿ ಪಡೆಯಬೇಕು. ವಿಸರ್ಜನೆ ಮುಗಿದ ಬಳಿಕ ತೆರವುಗೊಳಿಸಬೇಕು. ರಕ್ಷಣೆ ಹೊಣೆಯೂ ಅವರದೇ.
*ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಬೇಕು. ಕರ್ಕಶ ಡಿಜೆ ಹಾಗೂ ಸೌಂಡ್ಸ್ ಸಿಸ್ಟಂ ಉಪಯೋಗಿಸುವಂತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಯಾವುದೇ ಧ್ವನಿವರ್ಧಕ ಬಳಸಬಾರದು.
*ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ರಾತ್ರಿ 8ರೊಳಗೆ ಮುಗಿಸಬೇಕು.
*ಮೂರ್ತಿ ವಿಸರ್ಜಿಸುವವೇಳೆ ಈಜು ಬರುವ ಸ್ವಯಂಸೇವಕರೇ ಇಳಿಯಬೇಕು.
*ಓರ್ವ ಎಲೆಕ್ಟ್ರೀಶಿಯನ್ ಇರಬೇಕು. ಬೆಂಕಿ ನಂದಕ ಕಡ್ಡಾಯ.
*ಮೆರವಣಿಗೆಯಲ್ಲಿ ಉದ್ರೇಕಕಾರಿ ಘೋಷಣೆ ಕೂಗದಂತೆ, ಅನ್ಯರ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಿ.






