ಅಂಡಮಾನ್ ದ್ವೀಪಕ್ಕೆ ಈ ವಾರ ಮುಂಗಾರು ಅಪ್ಪಳಿಸುವ ನಿರೀಕ್ಷೆ!
Views: 29
ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯ ಅಂಡಮಾನ್ ದ್ವೀಪಕ್ಕೆ ಈ ವಾರ ಮುಂಗಾರು ಮಾರುತ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಾರುತ ರೂಪುಗೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ವಾರಾಂತ್ಯಕ್ಕೆ ಮುಂಗಾರು ಮಾರುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತಲುಪುವ ನಿರೀಕ್ಷೆ ಇದೆ ಎಂದು ಹೇಳಿದೆ.
“ಬಂಗಾಳಕೊಲ್ಲಿಯ ನೈರುತ್ಯಭಾಗದಲ್ಲಿ ಮೇ.12 ರಂದು ಬೆಳಿಗ್ಗೆ 8.30ರ ಸುಮಾರಿಗೆ ವಾಯುಭಾರ ಕುಸಿತ ಸಂಭವಿಸಿದೆ.
ಸಮುದ್ರಮಟ್ಟದಿಂದ 4.5 ಕಿಲೋಮೀಟರ್ ಎತ್ತರದಲ್ಲಿ ಬಿರುಗಾಳಿ ಪಸರಿಸಲಿದ್ದು, ಮುಂದಿನ 48 ಗಂಟೆಗಳಲ್ಲಿ ಇದು ಸಂಭವಿಸಲಿದೆ ಎಂದು ಸ್ಪಪಡಿಸಿದೆ. ಸಾಮಾನ್ಯವಾಗಿ ಮೇ 20ರವೇಳೆಗೆ ಅಂಡಮಾನ್ ಮತ್ತುನಿಕೋಬಾರ್ ಪ್ರವೇಶಿಸಿರುವ ಮುಂಗಾರು ನಿಧಾನವಾಗಿ ಕೇರಳದತ್ತ ಚಲಿಸುತ್ತದೆ.
ಹವಾಮಾನ ಇಲಾಖೆ ಮಂಗಳವಾರ ಎರಡು ಹೊಸ ಸೇವೆಗಳಿಗೆ ಚಾಲನೆ ನೀಡಿದ್ದು, ಎಐ ಚಾಲಿತ ಮುಂಗಾರು ಮುನ್ಸೂಚನೆ ವ್ಯವಸ್ಥೆ ಹಾಗೂ ಸ್ಥಳೀಯ ಹವಾಮಾನ ಮಾಹಿತಿ ವ್ಯವಸ್ಥೆಯನ್ನು ಆರಂಭಿಸಿದೆ. ಈ ವ್ಯವಸ್ಥೆಯಡಿ ನಾಲ್ಕು ವಾರ ಮುಂಚಿತವಾಗಿಯೇ ಸ್ಥಳೀಯ ಹವಾಮಾನ ಮಾಹಿತಿಯನ್ನು ನೀಡಲು ಸಾಧ್ಯವಾಗಲಿದ್ದು, ಇದು 16 ರಾಜ್ಯಗಳ 3000 ಉಪ ಜಿಲ್ಲೆಗಳಿಗೆ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡನೇ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಹೈರೆಸಲ್ಯೂಶನ್ ನಲ್ಲಿ ಮಳೆ ಮುನ್ಸೂಚನೆಯ ಚಿತ್ರಣವನ್ನು ಇದು ಉತ್ತರ ಪ್ರದೇಶಕ್ಕೆ ನೀಡಲಿದೆ. ವೀಕ್ಷಣಾ ಜಾಲ ಮತ್ತು ಎಐ ತಂತ್ರಗಳನ್ನು ಬಳಸಿಕೊಂಡು10 ದಿನ ಮುಂಚಿತವಾಗಿಯೇ 1 ಕಿಲೋಮೀಟರ್ ರೆಸೊಲ್ಯೂಶನ್ ನಲ್ಲಿ ಮಳೆ ಚಿತ್ರಣವನ್ನು ಇದು ನೀಡಲಿದೆ.






