ಜನಮನ

ಇನ್ಮುಂದೆ ರೇಷನ್‌ ಅಂಗಡಿಗಳ ಸಮಯದಲ್ಲಿ ಭಾರೀ ಬದಲಾವಣೆ: ಸರ್ಕಾರ ಮಹತ್ವದ ನಿರ್ಧಾರವೇನು?

Views: 115

ಕನ್ನಡ ಕರಾವಳಿ ಸುದ್ದಿ: ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ ನ್ಯೂಸ್‌ ಒಂದಿದೆ. ರಾಜ್ಯದ ನ್ಯಾಯಬೆಲೆ ಅಂಗಡಿಗಳ  ಕಾರ್ಯಾವಧಿ ಸಮಯವನ್ನು ವಿಸ್ತರಿಸುವ ಸಲುವಾಗಿ ಇದೀಗ ರಾಜ್ಯ ಸರ್ಕಾರ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಇನ್ಮುಂದೆ ರೇಷನ್‌ ಅಂಗಡಿಗಳು ಅಂದರೆ ನ್ಯಾಯಬೆಲೆ ಅಂಗಡಿಗಳ ಸಮಯದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಫಲಾನುಭವಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಇನ್ಮೇಲೆ ರೇಷನ್ ಅಂಗಡಿ ಸಮಯ ಬದಲಾಗಲಿದ್ದು, ಇನ್ಮೇಲೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತವೆ. ಈ ಹೊಸ ಸಮಯ ಬದಲಾವಣೆಯಿಂದಾಗಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಕಾರ್ಯ ನಿರ್ವಹಣೆಗಾಗಿ ಕಟ್ಟು ನಿಟ್ಟಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಿಂದಿನ ನಿಯಮದಂತೆ ಸೀಮಿತ ಅವಧಿಯಿಂದಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಫಲಾನುಭವಿಗಳು ದಿನನಿತ್ಯ ಬಂದು ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ ಇದರಿಂದ ಕೆಲಸದಲ್ಲಿರುವವರಿಗೆ, ದೂರದೂರುಗಳಲ್ಲಿರುವವರಿಗೆ ರೇಷನ್‌ ಪಡೆಯುವುದು ಕಷ್ಟಕರವಾಗುತ್ತಿತ್ತು. ಆದರೆ ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದೀಗ ಸರ್ಕಾರ ಹೊಸ ಸಮಯ ನಿಗದಿಪಡಿಸಿದೆ.

ಸರ್ಕಾರದ ಹೊಸ ನಿಯಮದ ಪ್ರಕಾರ, ಹೊಸ ವ್ಯವಸ್ಥೆಯಲ್ಲಿ ಇನ್ಮೇಲೆ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಸತತ 16 ಗಂಟೆಗಳ ಕಾಲ ತೆರೆದಿರಲಿದೆ. ಈ ನಿರ್ಧಾರದಿಂದ ಕೂಲಿ ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ಮಹಿಳೆಯರು ಸುಗಮವಾಗಿ ತಮ್ಮ ಪಡಿತರವನ್ನು ಪಡೆಯಬಹುದಾಗಿದೆ.

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ರೇಷನ್ ಅಂಗಡಿಗಳಿಗೆ ಹೊಸ ಸಮಯ ನಿಗದಿಪಡಿಸಲಾಗಿದ್ದು, ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆಯಲ್ಲಿ ಆಡಚಣೆ ಆಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

 

 

Related Articles

Back to top button
error: Content is protected !!