ಕೋಟೇಶ್ವರ ಪೇಟೆಯ ಸರ್ವೇ ಕಾರ್ಯ ಪೂರ್ಣ: ಆದಷ್ಟು ಬೇಗ ಸರ್ಕಾರಿ ಒತ್ತುವರಿ ಜಾಗ ತೆರವು ಮಾಡುವಂತೆ ಮನವಿ
Views: 1
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಪೇಟೆಯಿಂದ ಬೀಜಾಡಿ, ಗೋಪಾಡಿ ಮುಖ್ಯ ರಸ್ತೆಯ ಸರಕಾರಿ ಜಾಗ ಒತ್ತುವರಿ ಸರ್ವೇ ಕಾರ್ಯ ಸೆ. 1ರಂದು ವಿವಿಧೆಡೆ ಪೂರ್ತಿಗೊಂಡಿದ್ದು, ಒತ್ತುವರಿ ಜಾಗಕ್ಕೆ ಗುರುತು ಹಾಕಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ರೆವೆನ್ಯೂ ಇನ್‌ಸ್ಪೆಕ್ಟರ್ ದಿನೇಶ, ಸರಕಾರಿ ಸರ್ವೇಯರ್ ಯುಸೂಫ್, ಕಂದಾಯ ಇಲಾಖೆಯ ಅಧಿಕಾರಿಗಳು, ಕೋಟೇಶ್ವರ, ಬೀಜಾಡಿ, ಗೋಪಾಡಿ ಪಿಡಿಒ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆದಿದೆ.
ಸರಕಾರಿ ಜಾಗದ ಒತ್ತುವರಿಯ ಬಗ್ಗೆ ಸ್ಥಳೀಯ ಹಲವರು ಇಲಾಖೆಯ ಅಧಿಕಾರಿಗಳೊಡನೆ ಚರ್ಚೆ ನಡೆಸಿ, ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಸರ್ವೇ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳೀಯರಾದ ಗಣೇಶ ಪುತ್ರನ್ ಮಾತನಾಡಿ, ಕೋಟೇಶ್ವರ ಪೇಟೆ ಭಾಗದಲ್ಲಿ ಮೂರನೇ ದಿನದ ಸರ್ವೆ ಕಾರ್ಯ ಮುಗಿದು ನಾಲ್ಕನೇ ದಿನದ ಸರ್ವೇ ಕಾರ್ಯ ಮುಗಿಯಲಿದೆ. ಈ ಪ್ರದೇಶದಲ್ಲಿ ಹಲವಾರು ಸ್ಥಳಗಳು ಒತ್ತುವರಿಯಾದದ್ದು ಕಂಡುಬಂದಿದೆ. ಸರ್ವೇ ಇಲಾಖೆ ಒತ್ತುವರಿಯಾದ ಜಾಗದ ನಕ್ಷೆಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಸರ್ಕಾರಿ ಭೂಮಿಯನ್ನು ಗೊತ್ತಿದ್ದು ಗೊತ್ತಿಲ್ಲದೆ ಒತ್ತುವರಿ ಮಾಡಿದ್ದಲ್ಲಿ ಆದಷ್ಟು ಬೇಗ ತೆರವು ಮಾಡಿ ಸಾರ್ವಜನಿಕ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾರಾಯಣ ಪೈಂಟರ್, ರಾಜು, ಬೆಟ್ಟಿನಮನೆ, ಅಣ್ಣಪ್ಪ ಬೆಟ್ಟಿನ ಮನೆ, ಶೇಖರ ಮಠದಬೆಟ್ಟು, ಬಾಬಣ್ಣ ಉಪಸ್ಥಿತರಿದ್ದರು.






