ಜನಮನ

ನೇಪಾಳ ದುರಂತ:ತಂಗಿಯನ್ನು ಬೆನ್ನಿಗೇರಿಸಿಕೊಂಡು ನಾಪತ್ತೆಯಾದ ಪಾಲಕರ ಹುಡುಕಾಟದಲ್ಲಿ ಬಾಲಕ!

Views: 112

ಕನ್ನಡ ಕರಾವಳಿ ಸುದ್ದಿ: ನೇಪಾಳದ ರಸುವಾ ಜಿಲ್ಲೆಯಲ್ಲಿ ಕಂಡುಬಂದಿದೆ ಎನ್ನಲಾದ ದೃಶ್ಯ ಇದಾಗಿದ್ದು, ಪುಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸಾಗುತ್ತಿರುವುದು ಕಂಡುಬಂದಿದೆ. ಸುತ್ತಲೂ ಪ್ರವಾಹದ ನೀರು, ಅವ್ಯವಸ್ಥೆ ಹಾಗೂ ಭಯದ ವಾತಾವರಣ ಇದ್ದರೂ, ಬಾಲಕ ಮಾತ್ರ ತನ್ನ ತಂಗಿಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಪ್ರಯತ್ನಿಸುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ.

ಇನ್ನು, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಪ್ರವಾಹದ ಸಂದರ್ಭದಲ್ಲಿ ತಮ್ಮ ಪೋಷಕರು ನಾಪತ್ತೆಯಾಗಿದ್ದು, ಅವರನ್ನು ಹುಡುಕುತ್ತಾ ಮಕ್ಕಳು ಅಲೆದಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ವೈರಲ್ ದೃಶ್ಯದಲ್ಲಿ ಇಬ್ಬರು ಮಕ್ಕಳ ಮುಖದಲ್ಲೂ ಗಾಯದ ಗುರುತುಗಳು ಕಾಣಿಸುತ್ತವೆ. ತಾನೇ ಸಂಕಷ್ಟದಲ್ಲಿದ್ದರೂ ತಂಗಿಯನ್ನು ಬಿಟ್ಟು ಹೋಗದೆ, ಆಕೆಯನ್ನು ಬೆನ್ನಿಗೇರಿಸಿಕೊಂಡು ಬಾಲಕ ಸಾಗಿದ್ದಾನೆ. ಪ್ರವಾಹದ ಭೀಕರತೆಯ ನಡುವೆಯೂ ತಂಗಿಯನ್ನು ಕಾಪಾಡಲು ಆತ ತೋರಿದ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪದ ಭೀಕರತೆಯನ್ನು ತೋರಿಸುವ ಈ ದೃಶ್ಯ, ಅದೇ ಸಮಯದಲ್ಲಿ ಕಷ್ಟದ ಸಂದರ್ಭದಲ್ಲಿ ಕುಟುಂಬದ ಮೇಲಿನ ಪ್ರೀತಿ, ಕಾಳಜಿ ಹಾಗೂ ಜವಾಬ್ದಾರಿ ಎಷ್ಟು ಗಟ್ಟಿಯಾಗಿರುತ್ತೆ ಅನ್ನೋದನ್ನೂ ತೋರಿಸಿದೆ. ಅಣ್ಣ-ತಂಗಿಯ ಈ ದೃಶ್ಯ ಕಂಡು ಅನೇಕರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

Related Articles

Back to top button
error: Content is protected !!