ಇತರೆ

ಕುಂದಾಪುರ: ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದ ಕಾಳಾವರದ ವ್ಯಕ್ತಿ ನಾಪತ್ತೆ!

Views: 41

ಕುಂದಾಪುರ: ಶಿವಮೊಗ್ಗದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ 40 ವರ್ಷದ ಸುಧಾಕರ ಶೆಟ್ಟಿ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ಕೊಡ್ಲಾಡಿ ಗ್ರಾಮದ ಶಾಂತಾ ಶೆಟ್ಟಿ ಅವರ ಪತಿ ಸುಧಾಕರ ಶೆಟ್ಟಿ ಅವರು ಶಿವಮೊಗ್ಗದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗಾಗ ಕಾಳಾವರದಲ್ಲಿರುವ ತಮ್ಮ ಮನೆಗೆ ಹಾಗೂ ಪತ್ನಿಯ ಮನೆಗೆ ಬಂದು ಹೋಗುತ್ತಿದ್ದರು.

ಮೇ 7ರಂದು ಬೆಳಿಗ್ಗೆ ಸುಮಾರು 10:30ಕ್ಕೆ ಶಿವಮೊಗ್ಗದಿಂದ ಕಾಳಾವರದ ಮನೆಗೆ ಬಂದಿದ್ದ ಸುಧಾಕರ ಶೆಟ್ಟಿ, ಅದೇ ದಿನ ಸಂಜೆ 5:30ಕ್ಕೆ ಮತ್ತೆ ಶಿವಮೊಗ್ಗಕ್ಕೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಕೆಲಸಕ್ಕೂ ತೆರಳದೆ, ಮನೆಗೂ ವಾಪಸ್‌ ಬಾರದೆ ನಾಪತ್ತೆಯಾಗಿದ್ದಾರೆ.

ಸಂಬಂಧಿಕರು, ಸ್ನೇಹಿತರು ಹಾಗೂ ಮನೆಯ ಆಸುಪಾಸಿನಲ್ಲಿ ಹುಡುಕಾಟ ನಡೆಸಿದರೂ ಇದುವರೆಗೆ ಸುಧಾಕರ ಶೆಟ್ಟಿ ಅವರ ಪತ್ತೆಯಾಗಿಲ್ಲ.

ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!