ಇತರೆ

ಬೈಂದೂರು:ಯಡ್ತರೆಯಲ್ಲಿ ಕೃಷಿ ಚಟುವಟಿಕೆ ನಡೆಸುವಾಗ ವಿಷಕಾರಿ ಹಾವು ಕಚ್ಚಿ ಸಾವು 

Views: 15

ಕನ್ನಡ ಕರಾವಳಿ ಸುದ್ದಿ: ಕೃಷಿ ಚಟುವಟಿಕೆ ನಡೆಸುವಾಗ ವಿಷಕಾರಿ ಹಾವು ಕಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಯಡ್ತರೆಯಲ್ಲಿ ಸಂಭವಿಸಿದೆ.

ಯಡ್ತರೆ ಗ್ರಾಮದ ತೂದಳ್ಳಿ ನಿವಾಸಿ ವಿಜಯ ಆಚಾರಿ (70) ಮೃತಪಟ್ಟ ವ್ಯಕ್ತಿ. ಆ.29 ರಂದು ಸಂಜೆ ತೂದಳ್ಳಿ ಎಂಬಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಯಾವುದೋ ಒಂದು ವಿಷಕಾರಿ ಹಾವು ಬಲ ಕಾಲಿಗೆ ಕಚ್ಚಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆ.31ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

Back to top button
error: Content is protected !!