ಇತರೆ
ನೇಪಾಳ ಹಠಾತ್ ಪ್ರವಾಹ: ಕೆಸರಿನಡಿ ಉಸಿರಾಡುತ್ತಿರುವ ಮಗುವನ್ನು ಜೀವಂತವಾಗಿ ಹೊರತೆಗೆದ ರಕ್ಷಣಾ ಪಡೆ
Views: 20
ಕನ್ನಡ ಕರಾವಳಿ ಸುದ್ದಿ: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ ನೂರಾರು ಮಂದಿ ದಾರುಣವಾಗಿ ಸಾವಿಗೀಡಾದರೆ, ಇನ್ನೂ ಸಾವಿರಾರೂ ಮಂದಿಯ ಸುಳಿವೇ ಸಿಕ್ಕಿಲ್ಲ. ಮತ್ತೊಂದೆಡೆ, ಪವಾಡ ಸದೃಶ ಎನ್ನುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಮೂರು ದಿನಗಳ ಹಿಂದೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕಿ ಕೆಸರಿನಡಿ ಉಸಿರಾಡುತ್ತಿರುವುದನ್ನು ಗಮನಿಸಿದ ಕೂಡಲೇ ರಕ್ಷಣಾ ಪಡೆ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ಹೈವೇಗೆ ಗುಡ್ಡ ಜರಿದು ರಸುವಾ ಜಿಲ್ಲೆಯಲ್ಲಿ ಭೋಟೇಕೋಶಿ ನದಿ ಉಕ್ಕಿ ಹರಿದು ಸಂಭವಿಸಿದ ಭಾರಿ ದುರಂತದ ಮೂರು ದಿನಗಳ ಬಳಿಕ ತೇಲಿಬಂದ ದಪ್ಪನೆಯ ಕೆಸರು ಮತ್ತು ಕಸಗಳ ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ರಕ್ಷಣಾ ಪಡೆಯ ಸಿಬ್ಬಂದಿಗಳು ಜೀವಂತವಾಗಿ ಹೊರತೆಗೆದಿದ್ದಾರೆ. ಸಾವಿನ ರೌದ್ರಾನರ್ತನ ತಾಂಡವವಾಡುತ್ತಿರುವ ದುರಂತ ಭೂಮಿಯಲ್ಲಿ ಈ ಬಾಲಕಿಯ ರಕ್ಷಣೆ ಕಾಣೆಯಾದವರ ಕುಟುಂಬಸ್ಥರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
,






