ಇತರೆ

ಮಗಳ ಹಿಂದೆಯೇ ಕೆರೆಗೆ ಜಿಗಿದು ತಾಯಿಯೂ ಸಾವಿಗೆ ಶರಣು!

Views: 28

ಕನ್ನಡ ಕರಾವಳಿ ಸುದ್ದಿ: ಮಗಳ ಹಿಂದೆಯೇ ಜಿಗಿದು ತಾಯಿಯೂ ಸಾವಿಗೆ ಶರಣು ಸಮೀಪದ ತಲಕಾವೇರಿ ಗ್ರಾಮದಲ್ಲಿ ವರದಿಯಾಗಿದೆ.

ಮೃತ ದುರ್ದೈವಿಯನ್ನು ತಾಯಿ ಪ್ರೇಮ (45), ಪುತ್ರಿ ಪ್ರಿಯಾಂಕ (14) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪ್ರೇಮ ಜತೆಗೆ ಜಗಳ ಮಾಡಿಕೊಂಡಿದ್ದ ಮಗಳು, ತೀರ ಮನನೊಂದು ಸಾಯುವುದಾಗಿ ಹೇಳಿ ಕೆರೆಗೆ ಹಾರಿದ್ದಾಳೆ. ಇದೇ ವೇಳೆ, ಪ್ರಿಯಾಂಕಾ ಹಿಂದೆ ಓಡಿದ ಪ್ರೇಮ ಕೂಡ ನೀರಿಗೆ ಜಿಗಿದಿದ್ದಾರೆ. ಆದರೆ, ಸ್ಥಳೀಯರಿಂದ ಇಬ್ಬರನ್ನು ರಕ್ಷಿಸುವ ಪ್ರಯತ್ನ ವಿಫಲವಾಗಿದೆ.

ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿಯ ಸಹಾಯದಿಂದ ಕರೆಯಿಂದ ತಾಯಿ ಮತ್ತು ಮಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಸ್ತುತ, ಪ್ರಕರಣ ದಾಖಲಿಸಿಕೊಂಡಿರುವ ಭಾಗಮಂಡಲ ಪೊಲೀಸರು, ದುರಂತದ ಹಿಂದಿರುವ ಕಾರಣವೇನು ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.

Related Articles

Back to top button
error: Content is protected !!