ಜನಮನ

ನೇಪಾಳದಲ್ಲಿ ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳು ಕೊಚ್ಚಿಹೋದರೂ ‘ಹಸಿರು ಮನೆ’ ಭದ್ರವಾಗಿ ಉಳಿಯಲು ಕಾರಣವೇನು?

Views: 63

ಕನ್ನಡ ಕರಾವಳಿ ಸುದ್ದಿ:ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸುತ್ತಮುತ್ತಲಿನ ಎಲ್ಲಾ ಕಟ್ಟಡಗಳು ಕೊಚ್ಚಿಹೋದರೂ, ಆ ಪ್ರಸಿದ್ಧ ಹಸಿರು ಮನೆ ಭದ್ರವಾಗಿ ಉಳಿದಿದೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ಆ ಹಸಿರು ಬಣ್ಣದ ಮನೆ

ಕಲ್ಲು, ಮಣ್ಣು, ಮರದ ದಿಮ್ಮಿ, ಕೆಸರು ಮಿಶ್ರಿತ ನೀರಿನ ಭೋರ್ಗರತೆದ ನಡುವೆ ಆ ಹಸಿರು ಬಣ್ಣದ ಮನೆ ಮಾತ್ರ ಒಂದು ಇಂಚು ವಾಲಾಡದೆ ಎದೆಯೊಡ್ಡಿ ನಿಂತಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನೆಟ್ಟಿಗರು ಕೂಡ ಅಚ್ಚರಿಯಿಂದ ಈ ಮನೆ ಅಷ್ಟು ಸದೃಡವಾಗಿ ನಿಲ್ಲುವುದಕ್ಕೆ ಕಾರಣವೇನು, ಈ ಮನೆಯನ್ನು ನಿರ್ಮಿಸಿದ ಇಂಜಿನಿಯರ್ ಯಾರೆಂದು ಪ್ರಶ್ನಿಸಿದ್ದರು. ಇದೀಗ ಈ ಎಲ್ಲಾ ಗೊಂದಲಗಳಿಗೆ ಉತ್ತರ ಸಿಕ್ಕಿದೆ.

ವರದಿಗಳ ಪ್ರಕಾರ, ವಾಹದ ಮಧ್ಯೆ ಗಟ್ಟಿಯಾಗಿ ನಿಂತಿದ್ದ ಈ ಮನೆ ಆರ್ ಸಿಸಿ ಅಂದರೆ ಬಲವರ್ಧಿತ ಕಾಂಕ್ರೀಟ್ ಪ್ರೇಮ್ ರಚನೆಯ ಮೇಲೆ ನಿರ್ಮಾಣವಾಗಿರಬಹುದು. ಅಂದರೆ ಮನೆಯೊಳಗೆ ಕಬ್ಬಿಣದ ಸರಳುಗಳಿಂದ ಬಲಪಡಿಸಿದ ಕಾಂಕ್ರೀಟ್ ಕಾಲಮ್ ಮತ್ತು ಬೀಮ್ ಗಟ್ಟಿಯಾದ ಚೌಕಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಹೀಗಾಗಿ ಪ್ರವಾಹದ ಒತ್ತಡ ಬಂದಾಗ ಅದರ ಸಂಪೂರ್ಣ ಹೊಡೆತ ಕೇವಲ ಗೋಡೆಗಳ ಮೇಲೆ ಬೀಳುವುದಿಲ್ಲ. ಮನೆಯ ಮುಖ್ಯ ರಚನೆ ಆ ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರವಾಹವು ಬಂದು ಅಪ್ಪಳಿಸಿದಾಗ, ಈ ಪ್ರೇಮ್ ಆ ಭಾರಿ ಬಲವನ್ನು ಹೀರಿಕೊಂಡು ನೇರವಾಗಿ ಭೂಮಿಗೆ ವರ್ಗಾಯಿಸಿರುವುದು ಗಮನಾರ್ಹ.

ಮುಖ್ಯವಾಗಿ, ನದಿ ಹರಿದುಬರುವ ದಿಕ್ಕಿನಲ್ಲಿ ಮನೆಯ ಕಟ್ಟಡ ವಿನ್ಯಾಸವು ‘ವಿ’ ಶೇಪ್‌ನಲ್ಲಿರುವುದನ್ನು ಕಾಣಬಹುದು. ಇದು ಪ್ರವಾಹದ ಹೊಡೆತವನ್ನು ತಡೆದುಕೊಳ್ಳಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ ಎನ್ನಲಾಗುತ್ತಿದೆ.

ಇನ್ನು, ಪ್ರವಾಹದ ಅಂಚಿನಲ್ಲಿ ಮೊದಲು ಬಂದ ದೊಡ್ಡಮಟ್ಟದ ಕೆಸರು, ಈ ಮನೆಯ ಸುತ್ತಲೂ ಒಂದು ರ್ಯಾಂಪ್ ರಚಿಸಿದ್ದರಿಂದ, ಅನಂತರ ನುಗ್ಗಿ ಬಂದ ನೀರು ಕವಲೊಡೆದು ಮನೆಯನ್ನು ಬಳಸಿಕೊಂಡು ಹೋಗಿದೆ. ಹೀಗಾಗಿ ಮನೆ ಉಳಿದಿದೆ ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಇದು ಒಂದು ಪವಾಡದಂತೆ ಕಂಡರೂ, ಸೂಕ್ತವಾದ ಕಟ್ಟಡ ನಿರ್ಮಾಣ ಯೋಜನೆ ಮತ್ತು ಇಂಜಿನಿಯರಿಂಗ್ ನೈಪುಣ್ಯತೆ ಹೇಗೆ ವಿಪತ್ತಿನ ಸಮಯದಲ್ಲಿ ಜೀವ ಉಳಿಸಬಲ್ಲದು ಎಂಬುದಕ್ಕೆ ಈ ಹಸಿರು ಮನೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

Related Articles

Back to top button
error: Content is protected !!