ಟೆಲಿಗ್ರಾಂ ಆಪ್ ‘ಮೇಕ್ ಮೈ ಟ್ರಿಪ್’ ಹೆಸರಲ್ಲಿ ಕೋಟದ ವ್ಯಕ್ತಿಗೆ ರೂ.23 ಲಕ್ಷ ಕ್ಕೂ ಹೆಚ್ಚು ಸೈಬರ್ ವಂಚನೆ

Views: 0
ಸೈಬರ್ ವಂಚಕರು ‘ಮೇಕ್ ಮೈ ಟ್ರಿಪ್ ‘ಹೆಸರಿನಲ್ಲಿ ಕೋಟದ ಕಾರ್ಕಡ ಗ್ರಾಮದ ವ್ಯಕ್ತಿಯೊಬ್ಬರು ಆನ್ಲೈನ್ ವಂಚನೆಗೆ ಒಳಗಾಗಿ ಸುಮಾರು 23 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಟೆಲಿಗ್ರಾಂ ಆಪ್ ಗೆ ಮಹಿಳೆಯೊಬ್ಬರ ಹೆಸರಿನಿಂದ ‘ಮೇಕ್ ಮೈ ಟ್ರಿಪ್ ‘ಎಂಬ ಸಂದೇಶ ಬಂದಿದ್ದು ಆಸಕ್ತಿ ಇದ್ದಲ್ಲಿ ಭಾಗವಹಿಸುವಂತೆ ಹೇಳಲಾಗಿದೆ. ಮುಂದುವರಿದ ವಂಚಕರು ಕಳುಹಿಸಿದ ಲಿಂಕ್ನಲ್ಲಿ ಜಾಯಿನ್ ಆಗಿದ್ದಾರೆ. ‘ಮೇಕ್ ಮೈ ಟ್ರಿಪ್’ ನಲ್ಲಿ ಬುಕಿಂಗ್ ಮಾಡಿ ಇದರ ಮೊತ್ತವನ್ನು ಮೊದಲಿಗೆ ಪಾವತಿಸಿದರೆ ಬುಕಿಂಗ್ ಆಗಿ ಕಮಿಷನ್ ಸೇರಿ ಸಂದಾಯ ಮಾಡುವ ಮೊತ್ತವು ವಾಲೆಟ್ ಅಕೌಂಟ್ ನಲ್ಲಿ ಶೋ ಆಗುವುದಾಗಿ ವಂಚಕರು ಹೇಳಿದ್ದಾರೆ.
ಹೀಗೆ ಹಂತ ಹಂತವಾಗಿ ಹಣವನ್ನು ಸೈಬರ್ ವಂಚಕರು ಪಾವತಿಸುವಂತೆ ಹೇಳಿದಾಗ ಬ್ಯಾಂಕ್ ಗಳ ಅಕೌಂಟ್ ನಿಂದ ಹಂತ ಹಂತವಾಗಿ ಅವರು ಹೇಳಿದಷ್ಟು ಹಣವನ್ನು ಪಾವತಿ ಮಾಡಿದ್ದು ‘ಗರಿಷ್ಠ ಮೊತ್ತದ ಅರ್ಧ ಹಣ ಎಂದರೆ 16.05 ,231 ರೂ ಮೊತ್ತವನ್ನು ಪಾವತಿ ಮಾಡಬೇಕು ಇಲ್ಲವಾದರೆ ಈವರೆಗೆ ಸಂದಾಯ ಮಾಡಿದ ಎಲ್ಲಾ ಹಣವು ಲ್ಯಾಪ್ಸ್ ಆಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಇನ್ನೂ ಹೆಚ್ಚಿಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಹಣ ಸಂದಾಯ ಮಾಡದಿದ್ದರೆ ಬಿಸಿನೆಸ್ ಟ್ರಾನ್ಸಾಕ್ಷನ್ ವಾಲೆಟ್ ಲ್ಯಾಪ್ಸ್ ಆಗಿರುವುದಾಗಿ ಹೇಳಿದ್ದಾರೆ.
ಹೀಗೆ ಹಂತ ಹಂತವಾಗಿ ಪುಲಾಯಿಸಿ ಒಟ್ಟು 23, 71, 456 ಹಣವನ್ನು ಕಳೆದುಕೊಂಡಿದ್ದರು. ಪೊಲೀಸರು ಐಟಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತಿದ್ದಾರೆ.






