ಮೂರು ಮಕ್ಕಳ ತಾಯಿ ಯುವಕನೊಂದಿಗೆ ಪ್ರೇಮ ಪ್ರಣಯ: ಹೆಂಡತಿಯೊಂದಿಗಿನ ಜಗಳ ಕೊಲೆಯಲ್ಲಿ ಅಂತ್ಯ!
Views: 93
ಕನ್ನಡ ಕರಾವಳಿ ಸುದ್ದಿ: ಗಂಡನಿಂದ ದೂರವಾಗಿದ್ದ ಉಮಾ ತಮ್ಮ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ಮೂರು ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುವುದು ಉಮಾಗೆ ಕಷ್ಟವಾಗಿತ್ತು. ಹೀಗಾಗಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಇನ್ನು ಉಮಾಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಹಿರಿಯ ಮಗ ತನ್ನ ತಂದೆಯೊಂದಿಗೆ ವಾಸವಿದ್ದರೆ, ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು.
ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾರಿಗೆ ಅಂದು ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ರೈಲ್ವೆ ಸ್ಟೇಷನ್‌ಗೆ ಬರೋದು, ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸು ಪ್ರಯತ್ನ ಮಾಡುವುದು ಹೀಗೆ ಕೆಲ ತಿಂಗಳು ನಡೆದಿದೆ. ಆದಾದ ಬಳಿಕ ಇಬ್ಬರು ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂಬರ್ಪೋನ್ ನಂಬರ್ ಎಕ್ಸ್ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ ಚಾಟಿಂಗ್, ಫೋನ್ ಕಾಲಿಂಗ್ ಜೋರಿರುತ್ತೆ. ಉಮಾ ಖಾಜಾನ ಜೊತೆಗೆ ಮಾತನಾಡುವ ವಿಷಯ ಅವರ ಮನೆಯಲ್ಲೂ ಗೊತ್ತಿರುತ್ತದೆ. ಉಮಾಳ ಸಹೋದರಿ ಯಾಕೆ ಇಷ್ಟೊಂದು ಫೋನ್ನಲ್ಲಿ ಮಾತಾಡೋದು, ಯಾರದು ಎಂದು ಕೇಳಿದ್ದಾರೆ. ಆಗ ಉಮಾ ಖಾಜಾ ಅಂತಾ, ಅವನು ನನ್ನ ಫ್ರೆಂಡ್ ಅಂತ ಹೇಳಿದ್ದಾರೆ. ಮೂರು ಮಕ್ಕಳ ತಾಯಿಯಾಗಿದ್ದ ಉಮಾಳಿಗೆ ಮುಸ್ಲಿಂ ಯುವಕ ಖಾಜಾ ಮೇಲೆ ಲವ್ ಆಗಿಯೇ ಬಿಟ್ಟಿದೆ. ಇತ್ತ ಖಾಜಾ ಕೂಡ ಲವ್ನಲ್ಲಿ ಬಿದ್ದಿದ್ದ. ಇಬ್ಬರ ಪ್ರೇಮ ಪ್ರಣಯ ಶುರುವಾಗಿದೆ.
ಉಮಾ ಯಾವಾಗ ಖಾಜಾನ ಪ್ರೀತಿಯಲ್ಲಿ ಬಿದ್ದರೋ, ಆಗ ಅವರು ಮನೆ-ಮಕ್ಕಳು ಎಲ್ಲವನ್ನ ಮರೆತಿದ್ದಾರೆ. ಮೂರು ಹೊತ್ತು ಖಾಜಾನ ಜೊತೆಗೆ ಮಾತು, ಚಾಟಿಂಗ್, ಡೇಟಿಂಗ್ ಜೋರಾಗಿತ್ತು. ಪರಿಚಯವಾಗಿ 8 ತಿಂಗಳ ಕಳೆದಿತ್ತು. ಅದರಲ್ಲಿ ಮನೆಯವರಿಗೆ ಹೇಳದೇನೆ ಕಳೆದ ನಾಲ್ಕು ತಿಂಗಳ ಹಿಂದೆ ಇಬ್ಬರು ಗುಪ್ತವಾಗಿ ಮದುವೆ ಕೂಡ ಆಗಿದ್ದರಂತೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಹಣದ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿದೆ. ಜೊತೆಗೆ ಖಾಜಾನಿಗೆ ಉಮಾಳ ಸೌಂದರ್ಯ, ಆಕೆಯ ಮಾತು ತೆಲೆಕೆಡಿಸಿತ್ತು. ಬರುಬರುತ್ತ ಆಕೆಯ ಮೇಲೆ ಅನುಮಾನ ಪಡೋದಕ್ಕೆ ಶುರು ಮಾಡಿದ್ದ. ಉಮಾಳ ಫೋನ್ ಬಿಜಿ ಬಂದ್ರೆ ಸಾಕು ಜೋರು ಗಲಾಟೆ ಮಡುತ್ತಿದ್ದನಂತೆ. ಉಮಾರ ಮನೆಗೆ ಯಾವತ್ತು ಖಾಜಾ ಬರುತ್ತಿರಲಿಲ್ಲ, ಬದಲಿಗೆ ಇಬ್ಬರು ಹೊರಗಡೆ ಭೇಟಿ ಮಾಡುತ್ತಿದ್ದರಂತೆ.
ಜನವರಿ 6ರಂದು ಅನುಮಾನ, ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆಯಾದ ಬಳಿಕ ಉಮಾಳ ಮನೆ ಹತ್ತಿರಕ್ಕೆ ಖಾಜಾ ಬಂದಿದ್ದಾನೆ. ಮನೆ ಹತ್ತಿರ ಬರುತ್ತಿದ್ದಂತೆ ಉಮಾ ಅವರ ಮನೆ ಪಕ್ಕದ ಮನೆಯ ಮಹಡಿಗೆ ಹೋಗಿದ್ದಾರೆ. ಆಗ ಸಮಯ ಬೆಳಗಿನ ಜಾವ 4.30ರ ಸುಮಾರು, ಇಬ್ಬರು ಮಹಡಿ ಮೇಲೆ ಮಾತನಾಡುತ್ತಿದ್ದರು. ಸಿಟ್ಟಿನಲ್ಲಿದ್ದ ಖಾಜಾ ಕೊಲೆ ಮಾಡಲೇಬೇಕು ಅಂತಾ ಸಂಚು ಹಾಕಿ, ಹರಿತವಾದ ಚಾಕು ತಂದಿದ್ದ. ಮುಖಕ್ಕೆ ಟವೆಲ್ ಹಾಕಿ ಕೋಳಿ ಕುತ್ತಿಗೆ ಕೊಯ್ಯುವ ಹಾಗೆ ಉಮಾರ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಉಮಾ ಸ್ಥಳದಲ್ಲೇ ಮೃತಪಟ್ಟಿದ್ದರು.






