ಇತರೆ

ನನ್ನ ಹೆಸರಲ್ಲಿ ದುಡ್ಡು ಮಾಡ್ತೀರಿ, ನನಗೂ ಪಾಲು ಕೊಡಿ ಎಂದ ಜೇವರ್ಗಿ ತಹಸೀಲ್ದಾರ್ !

Views: 39

ಕನ್ನಡ ಕರಾವಳಿ ಸುದ್ದಿ:ನನ್ನ ಹೆಸರಿನಲ್ಲಿ ನೀವೆಲ್ಲಾ ದುಡ್ಡು ಮಾಡುತ್ತೀರಿ, ನನಗೂ ಪಾಲು ಕೊಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ತನಿಖೆ ಮಾಡಿಸುತ್ತೇನೆ” ಎಂದು ಅಧೀನ ಸಿಬ್ಬಂದಿಗೆ ತಹಸೀಲ್ದಾರ್ ಬೆದರಿಕೆ ಹಾಕಿದ್ದಾರೆ.

ಸರ್ಕಾರಿ ನೌಕರರಿಂದಲೇ ಹಫ್ತಾ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಜಿಲ್ಲೆಯ ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಕಿರುಕುಳ ತಾಳಲಾರದೆ ಸಿಬ್ಬಂದಿ ಇದೀಗ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸರ್ಕಾರಿ ಕಚೇರಿಯಲ್ಲೇ ಬಹಿರಂಗವಾಗಿ ಹಫ್ತಾ ವಸೂಲಿಗೆ ಇಳಿದಿರುವ ತಹಸೀಲ್ದಾರ್, ಸಭೆಯಲ್ಲೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರಿ ಜಯಂತಿಗಳು ಬರುತ್ತವೆ, ಶಾಸಕರು ಕೆಲಸ ಹೇಳುತ್ತಾರೆ. ಅದಕ್ಕೆಲ್ಲಾ ನಾನು ಎಲ್ಲಿಂದ ಹಣ ತರಲಿ? ನೀವು ಪ್ರತಿ ತಿಂಗಳು 5 ರಿಂದ 10 ಸಾವಿರ ರೂಪಾಯಿ ಕೊಡಬೇಕು. ಎಲ್ಲಾ ಇಲಾಖೆಯವರು ಹಣ ಹಾಕುತ್ತಾರೆ, ನೀವು ಕೂಡ ಸಮಾನವಾಗಿ ಷೇರ್ ಹಾಕಬೇಕು ಎಂದು ಸಿಬ್ಬಂದಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಹಸೀಲ್ದಾರರ ಈ ವಸೂಲಿ ಕಾಟಕ್ಕೆ ಬೇಸತ್ತ ಕಂದಾಯ ನಿರೀಕ್ಷಕರೊಬ್ಬರು (RI), “ಸರ್, ನನಗೆ ಈ ಜವಾಬ್ದಾರಿಯೇ ಬೇಡ. ನನ್ನನ್ನು ಆಫೀಸ್ ಕೆಲಸಕ್ಕೆ ಹಾಕಿ, ನನ್ನಿಂದ ಹಣ ಕೊಡಲು ಸಾಧ್ಯವಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತಹಸೀಲ್ದಾರರು, “ಬೇರೆಯವರ ಕಡೆಯಿಂದ ದುಡ್ಡು ಇಸ್ಕೊಂಡು ಕೊಡಲು ನಿಮಗೇನು ತ್ರಾಸ್ ಆಗುತ್ತೆ? ನೀವೇನು ನಿಮ್ಮ ಜೇಬಿಂದ ಕೊಡಲ್ವಲ್ಲ ಎಂದು ಸಿಬ್ಬಂದಿಯನ್ನು ಲೇವಡಿ ಮಾಡಿದ್ದಾರೆ ಎನ್ನಲಾಗಿದೆ.

ಸಿಬ್ಬಂದಿಯೊಬ್ಬರು ಅಳಲು ತೋಡಿಕೊಳ್ಳುತ್ತಾ, ನೀವು ಕೇಳಿದಾಗಲೆಲ್ಲಾ ಹಣ ಕೊಟ್ಟಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 50 ಸಾವಿರ ರೂಪಾಯಿಗೂ ಹೆಚ್ಚು ಹಣ ನೀಡಿದ್ದೇನೆ. ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ 10 ಸಾವಿರ ಕೇಳಿದಾಗಲೂ ಕೊಟ್ಟಿದ್ದೇವೆ. ಆದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದೀರಿ ಎಂದು ಸಭೆಯಲ್ಲಿಯೇ ಆಕ್ರೋಶ ಹೊರಹಾಕಿದ್ದಾರೆ.

 

Related Articles

Back to top button
error: Content is protected !!