ಕಣ್ಣಾರೆ ಕಂಡಿದ್ದೆಲ್ಲವನ್ನೂ ನೆನಪಿಟ್ಟುಕೊಳ್ಳುವ ಈ ಎಆರ್ ಕನ್ನಡಕ!
Views: 49
ಕನ್ನಡ ಕರಾವಳಿ ಸುದ್ದಿ: ಕಣ್ಣಾರೆ ಕಂಡಿದ್ದೆಲ್ಲವನ್ನೂ ನೆನಪಿಟ್ಟುಕೊಳ್ಳಬಹುದಾದ ವಾಸ್ತವಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ‘ಪಿಕಲ್’ ಎಂಬ ಸಂಸ್ಥೆಯು ಸ್ಮಾರ್ಟ್ ಎಆರ್ ಕನ್ನಡಕವನ್ನು ಪರಿಚಯಿಸಿದೆ.
ವಾಸ್ತವ ಜಗತ್ತಿನೊಳಗೆ ಕಾಲ್ಪನಿಕ ವಸ್ತು ಗೋಚರಿಸುವಂತೆ ಮಾಡುವ ಆಗ್ಲೆಂ ಟೆಡ್ ರಿಯಾಲಿಟಿ (ಎಆರ್) ತಂತ್ರಜ್ಞಾನ ವನ್ನು ಪಿಕಲ್-1 ಕನ್ನಡಕದಲ್ಲಿದೆ.
ಪ್ರತಿ ದಿನ ನೋಡುವ, ಕೇಳುವ ವಿಷಯ ಸಂಗ್ರಹಿಸಿ, ಅಗತ್ಯವಿದ್ದಾಗ ಹಳೆ ವಿಷಯ ನೆನಪಿಸುತ್ತದೆ. ಸಂದೇಶ ಓದಲು, ವಸ್ತು ಖರೀದಿ ಸೇರಿ ವ್ಯಕ್ತಿಯೊಂದಿಗೆ ಸಂವಹನ ನಡೆಸಬಲ್ಲ ಚಿತ್ರ, ಪದ, ಆ್ಯನಿಮೇಶನ್ ಕನ್ನಡಕದಲ್ಲಿನ ಪರದೆಯಲ್ಲಿ ಕಾಣಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.
ಪಿಕಲ್ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಮೂಲಕ ಈ ಕನ್ನಡಕವು ಕಾರ್ಯನಿರ್ವಹಿಸುತ್ತವೆ. ಮಾಲಕರು ಮಾತ್ರವೇ ಕನ್ನಡಕ ಬಳಸಲು ಅನುವಾಗುವಂತೆ ಬೆರಳಚ್ಚು ಆಧಾರಿತ ಅನ್ಲಾಕ್ ವ್ಯವಸ್ಥೆಯಿದ್ದು, ಇದರ ಬ್ಯಾಟರಿ 12 ಗಂಟೆ ಬಾಳಿಕೆ ಬರುತ್ತದೆ. ಸದ್ಯಕ್ಕೆ ಅಮೆರಿಕದಲ್ಲಿ ಮುಂಗಡ ಕಾಯ್ದಿರಿಸುವಿಕೆಗೆ ಮಾತ್ರವೇ ಈ ಕನ್ನಡಕ ಲಭ್ಯವಿದ್ದು, ಇದರ ಬೆಲೆ ಸುಮಾರು 72,000 ರೂ. ಆಗಿದೆ.






