ಯುವಜನ
ತಂದೆ- ತಾಯಿ ಪ್ರೀತಿಯಿಂದ ದೂರ: ಮನನೊಂದು ಬಾಲಕಿ ಆತ್ಮಹತ್ಯೆ
Views: 88
ಕನ್ನಡ ಕರಾವಳಿ ಸುದ್ದಿ: ಕೌಟುಂಬಿಕ ಕಲಹದಿಂದ ತಂದೆ ತಾಯಿ ಬೇರೆಯಾಗಿದ್ದರು. ಇದರಿಂದ ತನಗೆ ತಂದೆ, ತಾಯಿ ಪ್ರೀತಿ ಸಿಗುತ್ತಿಲ್ಲ ಎಂದು ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಲೇಖನಾ (17) ಆತ್ಮಹತ್ಯೆಗೆ ಶರಣಾದ ಬಾಲಕಿ
ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಲೇಖನಾ 10ನೇ ತರಗತಿ ಅನುತ್ತೀರ್ಣಳಾಗಿ ಮನೆಯಲ್ಲಿಯೇ ಇದ್ದಳು. ತಂದೆ – ತಾಯಿ ಕೌಟುಂಬಿಕ ಕಲಹದಿಂದ ದೂರವಾಗಿದ್ದರು. ತಂದೆ ಬೇರೆ ಕಡೆ ವಾಸವಾಗಿದ್ದರೆ, ಲೇಖನಾ ತಾಯಿ ಜೊತೆಗೆ ವಾಸವಿದ್ದಳು.
ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿ ಎಂಬ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದು ಲೇಖನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.






