ಇತರೆ

ಪತ್ನಿಯೊಂದಿಗೆ ಜಗಳವಾಡಿದ ಪತಿಯ ಶವ ನದಿಯಲ್ಲಿ ಪತ್ತೆ, ಸಂಶಯಾಸ್ಪದ ಸಾವು! ದೂರು ದಾಖಲು 

Views: 73

ಕನ್ನಡ ಕರಾವಳಿ ಸುದ್ದಿ: ಪತ್ನಿಯೊಂದಿಗೆ ಜಗಳವಾಡಿ ಓಡಿಹೋದ ಪತಿಯ ಶವ ಡಿ. 24ರಂದು ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಕಾರ್ಕಳದ ಮಿಯಾರು ಗ್ರಾಮದ ಬೈದರ್ಲಬೆಟ್ಟು ನಿವಾಸಿ ಯತೀಶ್ ಪೂಜಾರಿ (41)

ಯತೀಶ್ ಅವರಿಗೆ 15 ವರ್ಷಗಳ ಹಿಂದೆ ಹೊಸಂಗಡಿ ಗ್ರಾಮ ಪೆರಿಂಜೆಯ ಸುಜಯಾ ಅವರೊಂದಿಗೆ ವಿವಾಹವಾಗಿದ್ದು ಇಬ್ಬರು ಪುತ್ರರಿದ್ದಾರೆ. ಅವರು ಪತ್ನಿಯ ತವರು ಮನೆಯ ಪಕ್ಕದಲ್ಲೇ ಮನೆ ಮಾಡಿಕೊಂಡು ವಾಸವಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗಿ ಯತೀಶ್ ಮನೆ ಬಿಟ್ಟು ಹೋಗಿ ಸ್ವಲ್ಪ ಸಮಯ ತನ್ನ ಅಕ್ಕನ ಮನೆಯಲ್ಲಿದ್ದರು ಹಾಗೂ ಬಳಿಕ ವಿದೇಶಕ್ಕೆ ಹೋಗಿದ್ದರು.20 ದಿನಗಳ ಹಿಂದೆ ವಿದೇಶದ ಕೆಲಸ ಬಿಟ್ಟು ಬಂದಿದ್ದರು. ವಾರದ ಹಿಂದೆ ಮುಡಿಪುವಿನಲ್ಲಿ ಹೊಟೇಲ್ ಕೆಲಸಕ್ಕೆ ಸೇರಿದ್ದರು. ಈ ಸಂದರ್ಭ ಪತ್ನಿಯೊಂದಿಗೆ ದೂರವಾಣಿ ಮೂಲಕ ಜಗಳವಾಡಿದ್ದು, ಡಿ.22 ರಂದು ಸಂಜೆ 4ರ ಸುಮಾರಿಗೆ ಆಕೆಯ ಮನೆಗೆ ಹೋಗಿ ಪತ್ನಿ ಹಾಗೂ ಅವರ ಮನೆಯವರೊಂದಿಗೆ ಜಗಳವಾಡಿ ಏಕಾಏಕಿ ಓಡಿ ಹೋಗಿ ಕಾಣೆಯಾಗಿದ್ದರು. ಡಿ. 24ರಂದು ಸಂಜೆ 4ರ ಸುಮಾರಿಗೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಸಾವಿನಲ್ಲಿ ಸಂಶಯವಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಮೃತರ  ಅಣ್ಣ ಕಿಶೋರ್ ಕೋಟ್ಯಾನ್ ಅವರು ನೀಡಿದ ದೂರಿನಂತೆ ವೇಣೂರು ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ.

Related Articles

Back to top button