ಇತರೆ
ಕುಂದಾಪುರ: ನಕಲಿ ಚಿನ್ನಾಭರಣ ನೀಡಿ ವಂಚನೆ- ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ
Views: 324
ಕುಂದಾಪುರ: ನಕಲಿ ಚಿನ್ನಾಭರಣ ನೀಡಿ ವಂಚನೆ- ಆರೋಪಿ ಬಂಧನ, ಲಕ್ಷಾಂತರ ಮೌಲ್ಯದ ಸೊತ್ತು ವಶ
ಕನ್ನಡ ಕರಾವಳಿ ಸುದ್ದಿ: ರಾಯಚೂರು ಜಿಲ್ಲೆಯ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಜಯಪ್ರಕಾಸ್.ಡಿ ಬಂಧಿತ ಆರೋಪಿ.
ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಈ ಬಗ್ಗೆ ತನಿಖೆ ಕೈಗೊತ್ತಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 4,50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






