ರೈಲು ಹಳಿಗೆ ಹಾರಿ ಜೀವ ಕಳೆದುಕೊಂಡ ಪೊಲೀಸ್ ಪೇದೆಗೆ ತಯಾರಿ ನಡೆಸುತ್ತಿದ್ದ ಪರೀಕ್ಷಾರ್ಥಿ
Views: 143
ಕನ್ನಡ ಕರಾವಳಿ ಸುದ್ದಿ: ಪೊಲೀಸ್ ಪೇದೆ ಪರೀಕ್ಷಾರ್ಥಿ ಯುವತಿ ರೈಲು ಹಳಿಗೆ ಹಾರಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಲ್ಲವಿ ಕಗ್ಗಲ್ (25) ಮೃತ ಪರೀಕ್ಷಾರ್ಥಿ. ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ನಿವಾಸಿ ಆಗಿದ್ದ ಪಲ್ಲವಿ ಕಗ್ಗಲ್, ಬಿಕಾಂ ಮುಗಿಸಿದ್ದರು.
ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ನಿವಾಸಿ ಆಗಿದ್ದ ಪಲ್ಲವಿ ಕಗ್ಗಲ್, ಬಿಕಾಂ ಮುಗಿಸಿದ್ದರು. ಬಿಕಾಂ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಧಾರವಾಡಕ್ಕೆ ಬಂದಿದ್ದರು. 2021 ರಿಂದ ಧಾರವಾಡದಲ್ಲಿ ಓದುತ್ತಿದ್ದರು.
ಪೊಲೀಸ್ ಪೇದೆಗೆ ತಯಾರಿ ನಡೆಸಿದ್ದ ಪಲ್ಲವಿ, ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. 2024 ರಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಲಿಖಿತ ಪರೀಕ್ಷೆಯಲ್ಲಿ ಉತ್ತಿರ್ಣ ಆಗಿರಲಿಲ್ಲ. ಮತ್ತೆ ನೇಮಕಾತಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಳು.
ಎರಡು ಡೆತ್ನೋಟ್ ಪತ್ತೆ
ಮೃತ ಪಲ್ಲವಿಯ ಪ್ಯಾಂಟ್ ಕಿಸೆಯಲ್ಲಿ ಎರಡು ಪುಟಗಳ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂದೆ-ತಾಯಿ ಬಗ್ಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನಗೆ ಯಾವತ್ತೂ ನೀವು ಪ್ರೀತಿ ನೀಡಿಲ್ಲ. ಹಾಸ್ಟೆಲ್ನಲ್ಲೇ ನನ್ನ ಬೆಳೆಸಿದ್ದೀರಿ. ನನ್ನ ಬೇಕು ಮತ್ತು ಬೇಡಗಳನ್ನು ನೀವು ಕೇಳದ ಕಾರಣ ನಾನು ನೋವುಂಡಿದ್ದೇನೆ ಎಂದು ಬರೆದಿರೋದು ಕಂಡುಬಂದಿದೆ.
ಮತ್ತೊಂದು ಡೆತ್ನೋಟ್ ಆಕೆಯ ರೂಮಿನಲ್ಲಿ ಸಿಕ್ಕಿದ್ದು, ಅದರಲ್ಲಿ ಪ್ರೀತಿಸುತ್ತಿದ್ದ ಯುವಕನ ಬಳಿ ಪಲ್ಲವಿ ಕ್ಷಮೆ ಕೇಳಿದ್ದಾಳೆ. ನಮ್ಮವರು ನಿನ್ನೊಡನೆ ಬದುಕಲು ಅವಕಾಶ ಕೊಡಲಿಲ್ಲ. ಇದರಿಂದಾಗಿ ನನ್ನ ಮನಸ್ಸಿಗೆ ನೋವಾಗಿದೆ. ನನ್ನನ್ನು ನೀನು ಕ್ಷಮಿಸು, ಈ ನನ್ನ ಸಾವಿಗೆ ನಾನೇ ಕಾರಣ ಎಂದು ಪಲ್ಲವಿ ತಿಳಿಸಿದ್ದಾಳೆ.






