ಪ್ರೀತಿಸಿದ ಪ್ರಿಯಕರ ಮೋಸ ಮಾಡಿಬಿಟ್ಟ ಎಂದು ತಾಯಿ ಬಳಿ ಕ್ಷಮೆ ಕೇಳಿ.. ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
Views: 114
ಕನ್ನಡ ಕರಾವಳಿ ಸುದ್ದಿ : ಪ್ರೀತಿಸಿದ ಪ್ರಿಯಕರನೊಬ್ಬ ಮೋಸ ಮಾಡಿದ ಎಂಬ ಕಾರಣಕ್ಕೆ ಯುವತಿಯೊಬ್ಬಳು ತಾಯಿ ಬಳಿ ಕ್ಷಮೆ ಕೇಳಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.
22 ವರ್ಷದ ವರ್ಷಿಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಕಳೆದ ಎರಡು ವರ್ಷಗಳಿಂದ ವರ್ಷಿಣಿ ಹಾಗೂ ಅಭಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಬ್ಲ್ಯಾಕ್ ಮೇಲ್ ಮಾಡಿ ಅಭಿ ರಿಂಗ್ ಹಾಗೂ ಎಲ್ಲಾ ಹಣ ತೆಗೆದುಕೊಂಡಿದ್ದನಂತೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದನಂತೆ. ಅಷ್ಟೇ ಅಲ್ಲ, ಲೈಂಗಿಕವಾಗಿ ಸಹಕರಿಸಿದರೆ ಮಾತ್ರ ಫೋಟೋ ಡಿಲೀಟ್ ಮಾಡುತ್ತೇನೆ ಎನ್ನುತ್ತಿದ್ದನಂತೆ. ಈ ನಡುವೆ ವರ್ಷಿಣಿ ಗರ್ಭಿಣಿಯಾಗಿದ್ದು, ಅಭಿ ಗರ್ಭಪಾತ ಮಾಡಿಸಿದ್ದ ಎಂದು ವರ್ಷಿಣಿ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.
ತನ್ನ ತಾಯಿಯ ಬಳಿ ಕ್ಷಮೆ ಕೇಳಿರುವ ವರ್ಷಿಣಿ, ನಿನ್ನ ನಂಬಿಕೆಗೆ ನಾನು ಮೋಸ ಮಾಡಿದ್ದೇನೆ ಅಂತ ನನಗೆ ಗೊತ್ತು ಅಮ್ಮ. ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. ಸಾರಿ… ಸಾಯೋದನ್ನು ಬಿಟ್ಟು ಬೇರೆ ಯಾವ ದಾರಿಯೂ ಗೊತ್ತಾಗುತ್ತಿಲ್ಲ. ನಾನು ಅಭಿಯನ್ನು ನಂಬಬಾರದಿತ್ತು. ನೀವು ನನ್ನನ್ನು ತುಂಬಾ ನಂಬಿದ್ರಿ. ಆದ್ರೆ ಇದೊಂದು ತಪ್ಪಿಂದ ಅದನ್ನೆಲ್ಲಾ ಹಾಳು ಮಾಡಿಬಿಟ್ಟೆ. ಅವನನ್ನು ಮಾತ್ರ ಸುಮ್ಮನೇ ಬಿಡಬೇಡಿ. ದಯವಿಟ್ಟು ಯಾರೂ ನನ್ನ ಹಾಗೆ ಮಾಡಿಕೊಳ್ಳಬೇಡಿ ಎಂಬುದಾಗಿ ವರ್ಷಿಣಿ ಬರೆದಿದ್ದಾಳೆ ಎಂದು ತಿಳಿದುಬಂದಿದೆ.






