ರಾಜಕೀಯ

‘ಹೈಕಮಾಂಡ್ ಹೇಳಿದಾಗ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ’ ಮುಖ್ಯಮಂತ್ರಿ ಸಿದ್ದು 

Views: 74

ಕನ್ನಡ ಕರಾವಳಿ ಸುದ್ದಿ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಬೆಳಗಿನ ಉಪಹಾರ ಸೇವಿಸಿದರು. ಸಿದ್ದರಾಮಯ್ಯ ಅವರ ನೆಚ್ಚಿನ ನಾಟಿ ಕೋಳಿ ಪದಾರ್ಥ, ಇಡ್ಲಿ, ಉಪ್ಪಿಟ್ಟು ತಯಾರಿಸಲಾಗಿತ್ತು.

ಬ್ರೇಕ್ ಫಾಸ್ಟ್ ಬಳಿಕ ಉಭಯ ನಾಯಕರು ಮಾಧ್ಯಮಗಳ ಎದುರು ಹಾಜರಾದರು. ಈ ವೇಳೆ ಡಿಕೆಶಿಗೆ ಸಿಎಂ ಪಟ್ಟ ಒಲಿಯೋದ್ಯಾವಾಗ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದವು. ಅದಕ್ಕೆ ಕುತೂಹಲಕಾರಿ ಉತ್ತರ ನೀಡಿದ ಸಿದ್ದರಾಮಯ್ಯ, ‘ಹೈಕಮಾಂಡ್ ಹೇಳಿದಾಗ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ’ ಎಂದಿದ್ದಾರೆ. ಸದ್ಯಕ್ಕೆ ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತಾ? ಇಲ್ವಾ? ಎಂಬ ಪ್ರಶ್ನೆ ಶುರುವಾಗಿದೆ. ಸಿಎಂ ಹೇಳಿಕೆಯಿಂದ ಬೆಂಬಲಿಗರಲ್ಲಿ ಕುತೂಹಲ ಹೆಚ್ಚಾಗಿದೆ.

ಮುಂದುವರಿದು ಮಾತನ್ನಾಡಿದ ಅವರು.. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವ ಚರ್ಚೆ ನೆನ್ನೆ ಕೂಡ ಮಾಡಿದ್ದೇವೆ, ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಿಂದ ಇದ್ದೇವೆ. ನಾವು ಯಾವಾಗಲೂ ಬ್ರದರ್ಸ್. ಒಟ್ಟಿಗೆ ಕೆಲಸ ಮಾಡಿ 2028ಕ್ಕೆ ಮತ್ತೆ ಅಧಿಕಾರಕ್ಕೆ ಬರ್ತೇವೆ. ಡಿಸೆಂಬರ್ 2 ರಂದು ಹೈಕಮಾಂಡ್ ನಾಯಕ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಸಾಧ್ಯತೆ ಇದೆ. ನಾವು ಮೂವರು ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗ್ತೇವೆ ಎಂದರು.

ಬ್ರೇಕ್ ಫಾಸ್ಟ್ ಮೀಟಿಂಗ್ ನ ಉದ್ದೇಶವೇ ಪವರ್ ಶೇರಿಂಗ್ ವಿಚಾರದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಿಕೊಳ್ಳೋದು ಆಗಿತ್ತು. ಹೈಕಮಾಂಡ್ ಸೂಚನೆಯಂತೆ ಎರಡು ಬ್ರೇಕ್ಫಾಸ್ಟ್ ಮೀಟಿಂಗ್ ನಡೆದಿದೆ. ಇಬ್ಬರ ನಡುವಿನ ಚರ್ಚೆ ಬಳಿಕ, ನಾಯಕತ್ವ ಗೊಂದಲ ವಿಚಾರ ದೆಹಲಿಗೆ ಶಿಫ್ಟ್ ಆಗಿದೆ. ಉಭಯ ನಾಯಕರು ಹೈಕಮಾಂಡ್ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

Related Articles

Back to top button
error: Content is protected !!