ರಾಜಕೀಯ

ಬಾಗಲಕೋಟೆ ‘ಕೈ’ವಶ: ಉಮೇಶ ಮೇಟಿಗೆ ಭರ್ಜರಿ ಜಯ! 

Views: 10

ಕನ್ನಡ ಕರಾವಳಿ ಸುದ್ದಿ: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರು ಐತಿಹಾಸಿಕ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರ ವಿರುದ್ಧ 21,866 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.

ನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್‌ ಆರಂಭದಿಂದಲೂ ಅಜೇಯ ಮುನ್ನಡೆ ಕಾಯ್ದುಕೊಂಡಿತ್ತು. ಅಂತಿಮವಾಗಿ 23ನೇ ಸುತ್ತಿನ ಎಣಿಕೆ ಮುಕ್ತಾಯವಾದಾಗ ಉಮೇಶ ಮೇಟಿ ಅವರು ಬಿಜೆಪಿಯ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.

ಮತ ಎಣಿಕೆ ವಿವರ

ಕಾಂಗ್ರೆಸ್ (ಉಮೇಶ ಮೇಟಿ): 97,941 ಮತಗಳು

ಬಿಜೆಪಿ (ವೀರಣ್ಣ ಚರಂತಿಮಠ): 76,075 ಮತಗಳು

ವಿಜಯೋತ್ಸವದ ಸಂಭ್ರಮ

ಉಮೇಶ ಮೇಟಿ ಅವರ ಮುನ್ನಡೆ ತಿಳಿಯುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಕ್ಷದ ಬಾವುಟಗಳನ್ನು ಬೀಸಿ, ಪಟಾಕಿ ಸಿಡಿಸಿ, ಜೈಕಾರ ಹಾಕುತ್ತಾ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದರು. ಅಂಚೆ ಮತಪತ್ರ ಹಾಗೂ 85 ವರ್ಷ ಮೇಲ್ಪಟ್ಟವರ ಮನೆಯ ಮತಗಳ ಅಂತಿಮ ಕ್ರೂಢೀಕರಣ ಪ್ರಕ್ರಿಯೆ ಬಾಕಿ ಇದ್ದರೂ, ಲೀಡ್ ಆಧಾರದ ಮೇಲೆ ಗೆಲುವು ಘೋಷಿತವಾಗಿದೆ.

Related Articles

Back to top button
error: Content is protected !!