ಇತರೆ

ಮದುಮಗಳಿಗೆ ಹಾಕಬೇಕಿದ್ದ ಚಿನ್ನಾಭರಣದ ಬ್ಯಾಗ್ ಕದ್ದು ಮದುವೆ ಮಂಟಪದಿಂದಲೇ ಕಳ್ಳ ಪರಾರಿ 

Views: 20

ಕನ್ನಡ ಕರಾವಳಿ ಸುದ್ದಿ: ಮದುವೆ ಮಂಟಪಕ್ಕೆ ಕಳ್ಳನೊಬ್ಬ ನುಗ್ಗಿ ವಧುವಿಗೆ ಹಾಕಬೇಕಿದ್ದ ಚಿನ್ನ, ಬೆಳ್ಳಿ ಆಭರಣ, ನಗದು, ಮೊಬೈಲ್‌ಗಳನ್ನು ಕದ್ದು, ಎಸ್ಕೆಪ್ ಆಗಿದ್ದಾನೆ.

ಬ್ಯಾಗ್ ಸಮೇತ ಕಳ್ಳ ಎಸ್ಕೆಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಮಾರು 12 ಗಂಟೆಗೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. 40 ಗ್ರಾಂನ ಚಿನ್ನದ ಸರ, ಅರ್ಧ ಕೆ.ಜಿ. ಬೆಳ್ಳಿ, 10 ಸಾವಿರ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಖದೀಮ ದೋಚಿದ್ದಾನೆ ಎಂದು ತಿಳಿದು ಬಂದಿದೆ.

ಕಳ್ಳತನ ನಡೆದಿರುವ ಬಗ್ಗೆ ವಿನೋದ ಎನ್ನುವರು ದೂರು ಕೊಡಲು ಮುಂದಾಗಿದ್ದು, ಒಂದೇ ಬಿಲ್‌ನಲ್ಲಿ ನಾಲ್ಕು ಐಟಂಗಳು ಇವೆ, ಇದರಲ್ಲಿ ಎರಡು ಐಟಂ ಕಳ್ಳತನ ಆಗಿದೆ ಎಂದು ಹೇಳಿದ್ದೀರಿ. ಹೀಗಾಗಿ ಉಳಿದ ಎರಡು ಐಟಂ ತೆಗೆದುಕೊಂಡು ಬನ್ನಿ, ಆಮೇಲೆ ದೂರು ದಾಖಲಿಸಿಕೊಳ್ಳುತ್ತೇವೆಂದು ಪೊಲೀಸರು ಹೇಳಿದ್ದಾರೆ.

ಸದ್ಯ ಘಟನೆ ನಡೆದು 2 ದಿನಗಳಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Related Articles

Back to top button
error: Content is protected !!