ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ ಕಟ್ಟೆ: ವಾರ್ಷಿಕ ಕ್ರೀಡಾ ಸಂಭ್ರಮ
ಹೊಂಗಿರಣ ಶಾಲಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಕ್ಕಳ ವಾರ್ಷಿಕ ಕ್ರೀಡಾ ಸಂಭ್ರಮ
Views: 476
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಲಯದ ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಶಾಲಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮಕ್ಕಳ ವಾರ್ಷಿಕ ಕ್ರೀಡಾ ಸಂಭ್ರಮ ಕಾರ್ಯಕ್ರಮವು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಾಂಸ್ಕೃತಿಕ ಉತ್ಸವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶಂಕರ್ ಹೆಗ್ಡೆಯವರು ದೀಪ ಬೆಳಗಿಸುವುದರ ಮೂಲಕ ಕ್ರೀಡಾ ಸಂಭ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಕ್ರೀಡೆ ದೈಹಿಕ ಕ್ಷಮತೆಯ ದ್ಯೋತಕ. ಆರೋಗ್ಯಕರ ಜೀವನ ಶೈಲಿಯಿಂದ ಜೀವನ ಕ್ರಮದಲ್ಲಿ ಆಗಿರುವ ಏರುಪೇರುಗಳಿಗೆ ಕ್ರೀಡೆಯೇ ಮದ್ದು. ಪ್ರತಿಯೊಬ್ಬರು ಆಧುನಿಕ ಬದುಕಿನಲ್ಲಿ ಕ್ರೀಡೆಗೆ ಪ್ರಾಧಾನ್ಯತೆಯನ್ನು ನೀಡಬೇಕು. ಕ್ರೀಡೆಯನ್ನು ಸ್ಪರ್ಧೆಯಾಗಿ ಪರಿಗಣಿಸದೆ ಕ್ರೀಡಾ ಸ್ಪೂರ್ತಿಯಿಂದ ಸ್ವೀಕರಿಸಬೇಕು” ಎಂದರು.
ಸಾಂಸ್ಕೃತಿಕ ಉತ್ಸವದ ಕ್ರೀಡಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ದಿನಪಾಲ ಶೆಟ್ಟಿಯವರು ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಉತ್ಸವದ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ್ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ, ಉಪಾಧ್ಯಕ್ಷರಾದ ದಿವಾಕರ್ ಆಚಾರ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಕಿರಣ್ ಕುಮಾರ್ ಬಿ, ಶಿಸ್ತು ಪಾಲನೆ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ್ ಶೆಟ್ಟಿ, ಮುದ್ರಣ ಮತ್ತು ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀ ಕರುಣಾಕರ ಶೆಟ್ಟಿ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಸಾಂಸ್ಕೃತಿಕ ಉತ್ಸವದ ಯಶಸ್ವಿಗಾಗಿ ರಚಿಸಿರುವ ಆರ್ಥಿಕ ಸಮಿತಿ, ಸ್ವಾಗತ ಸಮಿತಿ, ಕ್ರೀಡಾ ಸಮಿತಿ, ಶಾಲಾ ಅಲಂಕಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ವಯಂಸೇವಕ ಸಮಿತಿ, ಊಟೋಪಾಚಾರ ಮತ್ತು ಆಹಾರ ಸಮಿತಿ, ಶಿಸ್ತು ಪಾಲನೆ ಮತ್ತು ಮೇಲುಸ್ತುವಾರಿ ಸಮಿತಿ, ಮುದ್ರಣ ಮತ್ತು ಪ್ರಚಾರ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಶಾಲಾ ಶಿಕ್ಷಕರಾದ ಶ್ರೀನಿವಾಸ್ ಸುಲೋಚನಾ ಎನ್, ಜಯಲಕ್ಷ್ಮಿ, ಲಲಿತ, ಮಾಲತಿ ಬಿ, ಶಾರದಾ, ಚಿತ್ರಾಕುಮಾರಿ, ರಶ್ಮಿ, ಪೂರ್ಣಿಮಾ, ಮಮತಾ, ರೂಪ, ಮಹಾಲಕ್ಷ್ಮಿ , ಭಾರತಿ, ಪೂರ್ವ ಪ್ರಾಥಮಿಕ ವಿಭಾಗದ ದೀಪಿಕಾ, ವೀಣಾ, ಅಡುಗೆ ಸಿಬ್ಬಂದಿಗಳಾದ ಆಶಾ ಶಾಂತ ಪುಷ್ಪ ಸವಿತಾ ಜ್ಯೋತಿ ಹಾಗೂ ಅನೇಕ ಪೋಷಕರು ಹಾಜರಿದ್ದರು.
ಎಲ್ಕೆಜಿಯಿಂದ ಏಳನೇ ತರಗತಿವರೆಗಿನ 467 ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ನೀಡಲಾಯಿತು. ಎಲ್ಲ ಶಿಕ್ಷಕರು ನಿರ್ಣಾಯಕರಾಗಿ ಸಹಕರಿಸಿದರು. ಸ್ಪರ್ಧೆಗಳ ವಿಭಾಗದ ಪ್ರಧಾನ ನಿರ್ಣಾಯಕ ರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಗಾವಳಿ, ಶ್ರೀ ಕಿರಣ್ ಕುಮಾರ್ ಬಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನ ಎನ್ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಆರಂಭದಲ್ಲಿ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಶೆಟ್ಟಿಗಾರ್ ಸ್ವಾಗತಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಲೋಚನ ವಂದಿಸಿದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು.









