ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕನೊಬ್ಬ ಸಾವಿಗೆ ಶರಣಾದ!
Views: 194
ಕನ್ನಡ ಕರಾವಳಿ ಸುದ್ದಿ: ಇಬ್ಬರು ಯುವತಿಯರ ಜೊತೆಗೆ ವಾಸವಿದ್ದ ಯುವಕನೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಷ್ಣು ಸಿಪಿ (39) ಸಾವಿಗೆ ಶರಣಾದ ಯುವಕ.
ಹುಳಿಮಾವು ಠಾಣೆ ವ್ಯಾಪ್ತಿಯ ಯಲ್ಲೇನಹಳ್ಳಿಯಲ್ಲಿ ನವೆಂಬರ್ 07 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯಲ್ಲೇನಹಳ್ಳಿಯ ರೆಡಿಯೆಂಟ್ ಶೈನ್ ಅಪಾರ್ಟ್ಮೆಂಟ್ನಲ್ಲಿ ವಿಷ್ಣು ವಾಸವಿದ್ದ. ಈತ ಸೂರ್ಯಕುಮಾರಿ ಹಾಗೂ ಜ್ಯೋತಿ ಎಂಬ ಯುವತಿಯರ ಜೊತೆ ವಾಸವಿದ್ದ.
ಇತ್ತೀಚೆಗೆ ಜ್ಯೋತಿ ಜೊತೆ ರಿಲೇಷನ್ಶಿಪ್ನಲ್ಲಿ ವಿಷ್ಣು ಇದ್ದನಂತೆ. ಜ್ಯೋತಿಗೂ ಮುಂಚೆ ಸೂರ್ಯಕುಮಾರಿ ಜೊತೆ ರಿಲೇಷನ್ಶಿಪ್ನಲ್ಲಿದ್ದ. ಈ ವಿಚಾರಕ್ಕೆ ಮೂವರ ಮಧ್ಯೆ ಗಲಾಟೆ ಶುರುವಾಗಿದೆ. ಇದರಿಂದ ಬೇಸತ್ತು ಫ್ಲಾಟ್ನ ಬಾತ್ರೂಮ್ನಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಇನ್ನು ಮೃತ ವಿಷ್ಣು ಹೊಸೂರು ರಸ್ತೆಯ ಎಕೆಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷ್ಣು ಸೋದರ ಜಿಷ್ಣು ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.






