ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕಾಲುವೆಯಲ್ಲಿ ಶವವಾಗಿ ಪತ್ತೆ
Views: 126
ಕನ್ನಡ ಕರಾವಳಿ ಸುದ್ದಿ: ದೀಪಾವಳಿ ದಿನದಂದು ಕಾಣೆಯಾಗಿದ್ದ ವಿದ್ಯಾರ್ಥಿನಿ ಕಾಲುವೆಯಲ್ಲಿ ಶವಯಾಗಿ ಪತ್ತೆಯಾಗಿದ್ದು, ಅಪಹರಿಸಿ ಕೊಲೆ ಮಾಡಿರುವ ಅನುಮಾನ ಪಾಲಕರಿಂದ ವ್ಯಕ್ತವಾಗಿದೆ. ತಾಲೂಕಿನ ಕೊಡೇಕಲ್ ಗ್ರಾಮದ ಸೌಜನ್ಯ (17) ಮೃತ ಪಟ್ಟ ದುರ್ದೈವಿ.
ಅ.21ರ ಮಂಗಳವಾರದಂದು ಕಾಣೆಯಾಗಿದ್ದ ಶನಿವಾರ ಶವವಾಗಿ ಶಹಾಪುರ ತಾಲೂಕಿನ ಗೋಗಿ ಬಳಿಯ ಕೃಷ್ಣಾ ಎಡದಂಡೆ ಕಾಲುವೆ ಯಲ್ಲಿ ಪತ್ತೆಯಾಗಿದೆ. ಅಪಹರಣ ಮಾಡಿ ಕೊಲೆ ಮಾಡಿದ್ದಾರೆ ಎಂದು ಪಾಲಕರು ಆರೋಪಿಸಿದ್ದು, ಚಿರು, ಪಾಂಡಾ ಹಾಗೂ ರಾಜೇಶ್ ಎನ್ನುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೂವರು ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ ಎಂದು ಮೃತಳ ತಂದೆ ಕೊಡೇಕಲ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಸೌಜನ್ಯಳ ಶವ ಆಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಹುಣಸಗಿ ಸಿಪಿಐ ವಾಹನ ತಡೆದು ಮಗಳ ಸಾವಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು,






