ಯುವಜನ
ಹೋಂ ಸ್ಟೇ ಸ್ನಾನ ಗೃಹದಲ್ಲಿ ಅನುಮಾನಾಸ್ಪದವಾಗಿ ಯುವತಿ ಸಾವು
Views: 125
ಕನ್ನಡ ಕರಾವಳಿ ಸುದ್ದಿ: ಹೋಮ್ ಸ್ಟೇ ಸ್ನಾನದ ಗೃಹದಲ್ಲಿ ಯುವತಿ ಕುಸಿದು ಬಿದ್ದು ಪ್ರಾಣಬಿಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಹೋಂ ಸ್ಟೇನಲ್ಲಿ ದುರ್ಘಟನೆ ನಡೆದಿದ್ದು, ಯುವತಿ ಸಾವಿನ ಹಿಂದೆ ಅನುಮಾನಗಳು ವ್ಯಕ್ತವಾಗಿವೆ.
ರಂಜಿತಾ (27) ಮೃತ ದುರ್ದೈವಿ. ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ಯುವತಿ ರಂಜಿತಾ, ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಎಂದು ಬೆಂಗಳೂರಿನಿಂದ ಹೋಗಿದ್ದಳು.
ಎಂಎಸ್ಸಿ ಪದವೀಧರೆ ಆಗಿದ್ದ ರಂಜಿತಾ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು. ಸ್ನಾನಕ್ಕೆ ಹೋದಾಗ ಬಾತ್ ರೂಂನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ಮತ್ತೊಬ್ಬ ಸ್ನೇಹಿತೆ ರೇಖಾ ದೂರು ನೀಡಿದ್ದಾಳೆ. ಗೀಸರ್ ನಲ್ಲಿ ಅನಿಲ ಸೋರಿಕೆಯಿಂದಾ ಮೃತಪಟ್ಟಳಾ? ಹೃದಯಾಘಾತ ಆಯಿತಾ? ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






