ಯುವಜನ

ಪರೀಕ್ಷೆ ಮುಗಿಸಿ ಬರುವಾಗ ವಿದ್ಯಾರ್ಥಿನಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಸೀಳಿ ಹತ್ಯೆ ಮಾಡಿದ ಪಾಗಲ್ ಪ್ರೇಮಿ..!

Views: 194

ಕನ್ನಡ ಕರಾವಳಿ ಸುದ್ದಿ: ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಯನ್ನು ಪಾಗಲ್ ಪ್ರೇಮಿಯೊಬ್ಬ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಶ್ರೀರಾಮಪುರ ರೈಲ್ವೇ ಟ್ರ್ಯಾಕ್ ಬಳಿ ನಡೆದಿದೆ.

ಯಾಮಿನಿ ಪ್ರಿಯ (20) ಕೊಲೆಯಾದ ವಿದ್ಯಾರ್ಥಿನಿ. ಬನಶಂಕರಿಯ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿನಿ ಮಧ್ಯಾಹ್ನ ಕಾಲೇಜಿನಿಂದ ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದಳು. ಮಲ್ಲೇಶ್ವರದ ಮಂತ್ರಿ ಮಾಲ್ ಬಳಿ ಇಳಿದು ರೈಲ್ವೆ ಟ್ರ್ಯಾಕ್ ಬಳಿ ಹೋಗ್ತಿದ್ದಾಗ ಹಿಂದಿನಿಂದ ಬಂದು ವಿಶ್ವೇಶ್ ಕತ್ತುಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಯಾಮಿನಿಯ ಹಿಂದೆ ಪ್ರಿಯಕರ ವಿಶ್ಲೇಶ್ ಬಿದ್ದಿದ್ದ. ವಿಶ್ವೇಶ್ ಪ್ರೀತಿಯನ್ನು ಯಾಮಿನಿ ತಿರಸ್ಕರಿಸಿದ್ದಳು. ಇಂದು ಮನೆಗೆ ಹೋಗುತ್ತಿದ್ದಾಗ ವಿಶ್ವೇಶ್ ಯಾಮಿನಿಯನ್ನು ಹಿಂಬಾಲಿಸಿದ್ದಾನೆ. ಕಣ್ಣಿಗೆ ಖಾರದ ಪುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಯಾಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಶ್ರೀರಾಂಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ಸ್ವತಂತ್ರ್ಯಪಾಳ್ಯದ ನಿವಾಸಿ ವಿಶ್ವೇಶ್ ಕೆಲ ವರ್ಷಗಳಿಂದ ಯಾಮಿನಿ ಪ್ರಿಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಒಮ್ಮೆ ಈಕೆಗೆ ಬಲವಂತವಾಗಿ ತಾಳಿ ಕೂಡ ಕಟ್ಟಿದ್ದ. ಇಷ್ಟವಿಲ್ಲದ ಯಾಮಿನಿ ಪಾಗಲ್ ಪ್ರೇಮಿಯ ತಾಳಿ ಕಿತ್ತೆಸೆದು ಈತನನ್ನು ದೂರ ಇಟ್ಟಿದ್ದಳು.

Related Articles

Back to top button
error: Content is protected !!