ಸರಿಗಮಪ ರಿಯಾಲಿಟಿ ಶೋ ಸುಹಾನ ಸೈಯದ್-ರಂಗಭೂಮಿ ಕಲಾವಿದ ನಿತಿನ್ ಮದುವೆ
Views: 196
ಕನ್ನಡ ಕರಾವಳಿ ಸುದ್ದಿ: ಸರಿಗಮಪ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಗಾಯಕಿ ಸುಹಾನ ಸೈಯದ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ನಿತಿನ್ ಎಂಬ ರಂಗಭೂಮಿ ಕಲಾವಿದನನ್ನು ಸುಹಾನ ಪ್ರೀತಿಸುತ್ತಿದ್ದು, ಈಗ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ. ವಿಶೇಷವೆಂದರೆ ಕುವೆಂಪು ಮಂತ್ರ ಮಾಂಗಲ್ಯದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಕನಕಪುರದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಆಗುತ್ತಿದ್ದಾರೆ.

ಸರಿಗಮಪ ಸೀಸನ್ 13 ರ ಸ್ಪರ್ಧೆಯಾಗಿದ್ದ ಸುಹಾನಾ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದ್ರು. ಶೋ ನಲ್ಲಿ ಹಾಡಿದ ಹಲವು ಗೀತೆಗಳ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸರಾಗಿದ್ರು. ತಮ್ಮ ಬೋಲ್ಡ್ ಲುಕ್ಸ್ ಹಾಗೂ ಡೊಂಟ್ ಕೇರ್ ಸ್ವಭಾವದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ಸದ್ಯ ಮದುವೆಗೆ ಸಜ್ಜಗಿರೋ ಸುಹಾನಾ ತಮ್ಮ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಬಹುಕಾಲದ ಗೆಳೆಯ ನಿತಿನ್ ಎಂಬುವವರನ್ನ ವರಿಸಲಿದ್ದಾರೆ ಸುಹಾನಾ. ಸುಹಾನಾ ಮದುವೆ ಆಗ್ತಿರೋ ಹುಡುಗ ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರು. ಪ್ರಸಿದ್ಧ ರಂಗ ತರಬೇತಿ ಕೇಂದ್ರ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇವರದ್ದು ಪ್ರೇಮ ವಿವಾಹ. 16 ವರ್ಷಗಳ ಸುದೀರ್ಘ ಸ್ನೇಹ ಪ್ರೀತಿ ಕಾರಣವಾಗಿದೆ.






