ಯುವಜನ
ಪ್ರೀತಿಸಿ ಮದುವೆಯಾದ ಯುವಕ.. ಹುಡುಗಿ ಇಷ್ಟ ಇಲ್ಲ, ಬೇರೆ ಜಾತಿಯವಳು ಎಂದು ಕಿರುಕುಳ: ನವ ವಿವಾಹಿತೆ ಆತ್ಮಹತ್ಯೆ
Views: 141
ಕನ್ನಡ ಕರಾವಳಿ ಸುದ್ದಿ :ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ರಾಮಲಿಂಗಾಪುರ ಗ್ರಾಮದ ಸಿರೀಶಾ (22) ಮೃತ ದುರ್ದೈವಿ.
ಐದು ವರ್ಷದಿಂದ ಯುವತಿ ಹಾಗೂ ಅದೇ ಗ್ರಾಮದ ಶ್ರೀನಾಥ್ ಎನ್ನುವ ಯುವಕ ಇಬ್ಬರು ಪ್ರೀತಿಸಿ ಕಳೆದ ವರ್ಷ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಮದುವೆ ನಂತರ ನಡೆದಿದ್ದೇ ಬೇರೆ, ಹುಡುಗಿ ಇಷ್ಟ ಇಲ್ಲ, ಅವಳು ಬೇರೆ ಜಾತಿಯವಳು ಎಂದು ಯುವಕನ ಕಡೆಯ ಕುಟುಂಬಸ್ಥರು ಯುವತಿಗೆ ಕಿರುಕುಳ ನೀಡುತ್ತಿದ್ದರು.
ತಮ್ಮದೇ ಕುಟುಂಬದಲ್ಲಿ ಮಾವನ ಮಗಳ ಜೊತೆ ಯುವಕನ ಮದುವೆ ಮಾಡಬೇಕು ಎಂದು ಆತನ ಪೋಷಕರು ಅಂದುಕೊಂಡಿದ್ದರು. ಆದರೆ ಇದರ ಮಧ್ಯೆ ಈ ಇಬ್ಬರು ಪ್ರೀತಿಸಿ ಮದುವೆಯಾದ ಮೇಲೆ ಎಲ್ಲವೂ ಕೆಟ್ಟು ಹೋಗಿತ್ತು. ಮದುವೆ ನಂತರ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಯುವತಿ ಕಡೆಯವರು ದೂರು ನೀಡಿದ್ದರು.ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.






