ಸಾಂಸ್ಕೃತಿಕ

ಫಾರ್ಚ್ಯೂನ್ ಗ್ರೂಪ್‌ ಆಫ್‌ ಹೋಟೆಲ್ಸ್‌ನ ವಕ್ವಾಡಿ ಪ್ರವೀಣ್ ಶೆಟ್ಟರಿಂದ ದುಬೈನಲ್ಲಿ ಕನ್ನಡಿಗರಿಗಾಗಿ  ʼಕಾಂತಾರ: ಚಾಪ್ಟರ್‌ 1ʼ ಉಚಿತ ಸ್ಪೆಷಲ್‌ ಶೋ

Views: 105

ಕನ್ನಡ ಕರಾವಳಿ ಸುದ್ದಿ: ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್‌ 1′ ಚಿತ್ರ ವಿಶ್ವಾದ್ಯಂತ ಇಂದು ತೆರೆಗೆ ಬರಲಿದೆ. ಅದಕ್ಕೆ ಮುಂಚಿತವಾಗಿ ಅಕ್ಟೋಬರ್ 1ರಂದು ಚಿತ್ರದ ಪ್ರೀಮಿಯರ್ ಶೋವನ್ನು ಕನ್ನಡಿಗರಿಗಾಗಿ ದುಬೈನಲ್ಲಿ ಆಯೋಜಿಸಲಾಗಿತ್ತು. ಈ ವಿಶೇಷ ಪ್ರದರ್ಶನದ ರೂವಾರಿ ಫಾರ್ಚ್ಯೂನ್ ಗ್ರೂಪ್‌ ಆಫ್‌ ಹೋಟೆಲ್ಸ್‌ನ ಚೇರ್‌‌ಮನ್ ವಕ್ವಾಡಿ ಪ್ರವೀಣ್ ಶೆಟ್ಟಿ.

ಯಾರಿಂದಲೂ ಯಾವುದೇ ಪ್ರಾಯೋಜಕತ್ವ ಪಡೆಯದೇ, ಅಲ್ಲಿಯ ಕನ್ನಡಿಗರಿಗಾಗಿ ತಾವೊಬ್ಬರೇ ʼಕಾಂತಾರ ಚಾಪ್ಟರ್ 1ʼ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.

ಮತ್ತೊಂದು ವಿಶೇಷ ಏನೆಂದರೆ, ಚಿತ್ರ ವೀಕ್ಷಿಸಲು ಪುರುಷರಿಗೆ ಕಪ್ಪು ಬಣ್ಣದ ಶರ್ಟ್ ಮತ್ತು ಬಿಳಿ ಪಂಚೆ, ಮಹಿಳೆಯರಿಗೆ ಸಾಂಪ್ರದಾಯಿಕ ಉಡುಪಿನ ಡ್ರೆಸ್ ಕೋಡ್ ನಿಗದಿಪಡಿಸಲಾಗಿತ್ತು. ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದಿರುವ ʼಕಾಂತಾರ ಚಾಪ್ಟರ್ 1ʼ ಚಿತ್ರವನ್ನು ಪ್ರದರ್ಶಿಸಲು ಇಲ್ಲಿಯ ಕನ್ನಡಿಗರನ್ನು ಒಂದೆಡೆ ಸೇರಿಸಿರುವ ಬಗ್ಗೆ ನ‌ನಗೆ ಹೆಮ್ಮೆ ಎನಿಸುತ್ತದೆ ಎಂದು ಪ್ರವೀಣ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ʼಕಾಂತಾರ ಚಾಪ್ಟರ್ 1ʼ ವಿಶೇಷ ಪ್ರದರ್ಶನ ಏರ್ಪಡಿಸಿರುವ ಬಗ್ಗೆ ದುಬೈನಲ್ಲಿರುವ ಕನ್ನಡಿಗರೂ ಹರ್ಷ ವ್ಯಕ್ತಪಡಿಸಿದ್ದಾರೆ.

ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ 

ಇಂದು ರಿಲೀಸ್‌

ಸ್ಯಾಂಡಲ್‌ವುಡ್‌ನ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್ 1ʼ ಚಿತ್ರ ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. 30ಕ್ಕೂ ಹೆಚ್ಚು ದೇಶಗಳಲ್ಲಿ, ಸುಮಾರು 8 ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದ್ದು, ಬುಧವಾರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಪೇಯ್ಡ್‌ ಪ್ರೀಮಿಯರ್‌ ಶೋ ಆಯೋಜಿಸಲಾಗಿದೆ. ಪೇಯ್ಡ್‌ ಪ್ರೀಮಿಯರ್‌ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Related Articles

Back to top button
error: Content is protected !!