ಯುವಜನ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕರಾವಳಿಯ ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ಗೆ ಆಯ್ಕೆ!

Views: 179

ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಸೀಸನ್-12ಕ್ಕೆ ಮಂಗಳೂರಿನ ರಕ್ಷಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ.

ಮೂಲತಃ ಮಂಗಳೂರಿನವರಾದ ರಕ್ಷಿತಾ ಮುಂಬೈನಲ್ಲಿ ವಾಸವಾಗಿದ್ದಾರೆ. ತುಳು, ಕನ್ನಡ, ಹಿಂದಿ ಭಾಷೆಯನ್ನು ಮಿಕ್ಸ್ ಮಾಡಿ ಮಾತನಾಡಿಯೇ ರಕ್ಷಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಕ್ಷಿತಾ ಶೆಟ್ಟಿ ನಾಲ್ಕನೇ ಸ್ಪರ್ಧಿ ಎಂದು ಬಿಗ್‌ಬಾಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಕಲರ್ಸ್‌ ವಾಹಿನಿ ಪ್ರೋಮೋ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಲೆಯನ್ನೇ ಎಬ್ಬಿಸಿದ ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯ ಕಂಟೆಸ್ಟೆಂಟ್ ಎಂದು ಪರಿಚಯ ಮಾಡಿಕೊಟ್ಟಿದೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕುಕ್ಕಿಂಗ್ ವಿಡಿಯೋ ಮಾಡುತ್ತಾರೆ. ಈ ಬಗ್ಗೆಯೇ ಬಿಗ್‌ಬಾಸ್ ವೇದಿಕೆಯಲ್ಲಿ ಪ್ರಶ್ನೆ ಕೇಳಿದ ಸುದೀಪ್, “ಮೀನು ಸಾರಿಗೆ ಸಕ್ಕರೆ ಹಾಕ್ತಿರಂತೆ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ಇದಕ್ಕೆ ರಕ್ಷಿತಾ ಕೊಟ್ಟ ಉತ್ತರ ಕೇಳಿ ನಕ್ಕಿದ್ದಾರೆ. ನಿಮ್ಮ ಅಡುಗೆ ಟೇಸ್ಟ್ ಮಾಡಿ ಚೆನ್ನಾಗಿದೆ ಅಂದಿದ್ಯಾರು? ಎಂದು ಕಿಚ್ಚ ಕೇಳಿದ್ದಾರೆ. ನಿಜ ಹೇಳಬೇಕು ಅಂದ್ರೆ ಯಾರೂ ಇಲ್ಲ ಎಂದು ರಕ್ಷಿತಾ ಫನ್ ಆಗಿ ಉತ್ತರ ಕೊಟ್ಟಿದ್ದಾರೆ”.

Related Articles

Back to top button
error: Content is protected !!